ಮಹಿಳಾ ಟಿ20 ವಿಶ್ವಕಪ್: ಮೈದಾನದಲ್ಲೇ ಅತ್ತ ಶಫಾಲಿ ವರ್ಮ

ಭಾನುವಾರ, 8 ಮಾರ್ಚ್ 2020 (17:29 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್ ಸೋತ ಬಳಿಕ ತೀವ್ರ ಹತಾಶೆಗೊಳಗಾದ ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಮೈದಾನದಲ್ಲೇ ಅತ್ತ ಘಟನೆ ನಡೆದಿದೆ.


ಭಾರತ ಆಲೌಟ್ ಆಗುತ್ತಿದ್ದಂತೇ ಆಸ್ಟ್ರೇಲಿಯನ್ನರು ಸಂಭ್ರಮಾಚರಿಸುತ್ತಿದ್ದರೆ, ಕುಸಿದು ಕೂತ ಶಫಾಲಿ ವರ್ಮ ಗಳ ಗಳನೆ ಅತ್ತ ದೃಶ್ಯ ಕಂಡುಬಂತು.

ಈ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಇಡೀ ಭಾರತ ತಂಡವೇ ಅವರನ್ನು ಸುತ್ತವರೆದು ಸಮಾಧಾನಿಸಿತು. ಟೂರ್ನಿಯುದ್ಧಕ್ಕೂ ಭಾರತಕ್ಕೆ ಅದ್ಭುತ ಆರಂಭ ನೀಡಿ ಪ್ರತೀ ಪಂದ್ಯದಲ್ಲೂ ರನ್ ಹೊಳೆ ಹರಿಸಿದ್ದ ಶಫಾಲಿ ತಂಡಕ್ಕೆ ಅಗತ್ಯವಿದ್ದಾಗ ಅಂತಿಮ ಪಂದ್ಯದಲ್ಲಿ ಜುಜುಬಿ 2 ರನ್ ಗೆ ಔಟಾಗಿದ್ದು ಅವರ ಹತಾಶೆಗೆ ಕಾರಣವಾಗಿತ್ತು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳಾ ಟಿ20 ವಿಶ್ವಕಪ್: ವನಿತೆಯರ ಕನಸು ನುಚ್ಚುನೂರು