ದುಬೈ: ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಖಡಕ್ ನಿಲುವಿನಿಂದಾಗಿ ಪಾಕಿಸ್ತಾನ ಇದೀಗ 2020 ರ ಏಷ್ಯಾ ಕಪ್ ಕ್ರಿಕೆಟ್ ಕೂಟವನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ನಿರ್ಧರಿಸಿದೆ.
ಯಾವುದೇ ಕಾರಣಕ್ಕೂ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲ್ಲ ಎಂದು ಗಂಗೂಲಿ ಹಠ ಹಿಡಿದಿದ್ದರಿಂದ ಒತ್ತಡಕ್ಕೆ ಮಣಿದ ಪಾಕ್ ಕ್ರಿಕೆಟ್ ಮಂಡಳಿ ಅಧ‍್ಯಕ್ಷ ಎಹ್ಸಾನ್ ಮಣಿ ಇದೀಗ ಪಾಕಿಸ್ತಾನದ ಹೊರಗೆ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸುವುದಾಗಿ ಹೇಳಿದ್ದಾರೆ.
ಅದರಂತೆ ಪಾಕ್ ದುಬೈನಲ್ಲಿ ಏಷ್ಯಾ ಕಪ್ ಆಯೋಜಿಸುವ ಸಾಧ‍್ಯತೆಯಿದೆ. ಇದಕ್ಕೂ ಮೊದಲು ಭಾರತ ಪಾಕಿಸ್ತಾನಕ್ಕೆ ಬಾರದೇ ಇದ್ದರೆ ನಾವೂ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಮಣಿ ಬೆದರಿಸುವ ತಂತ್ರ ಹೂಡಿದ್ದರು. ಆದರೆ ಇದಕ್ಕೆ ಗಂಗೂಲಿ ನೇತೃತ್ವದ ಬಿಸಿಸಿಐ ಬಿಲ್ ಕುಲ್ ಒಪ್ಪಿರಲಿಲ್ಲ.