Publish Date: Tue, 03 Mar 2020 (07:44 IST)
Updated Date: Tue, 03 Mar 2020 (07:46 IST)
ಮುಂಬೈ: ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅವಧಿ ಮುಕ್ತಾಯವಾದ ಬಳಿಕ ಟೀಂ ಇಂಡಿಯಾಗೆ ಹೊಸ ಆಯ್ಕೆ ಸಮಿತಿ ನೇಮಕವಾಗಿರಲಿಲ್ಲ. ಅದು ಇಂದು ನಡೆಯಲಿದೆ.
ಇಂದು ಬಿಸಿಸಿಐನ ಸಿಎಸಿ ಸಮಿತಿ ನೂತನ ಆಯ್ಕೆ ಸಮಿತಿ ಅಧ್ಯಕ್ಷ ಮತ್ತು ಇತರ ಸದಸ್ಯರ ಹೆಸರನ್ನು ಆಯ್ಕೆ ಮಾಡಲಿದೆ. ಇಂದು ಆಯ್ಕೆ ಸಮಿತಿ ಸದಸ್ಯರ ಹೆಸರನ್ನು ಅಂತಿಮಗೊಳಿಸಲಿರುವ ಸಿಎಸಿ ಬಿಸಿಸಿಐಗೆ ಶಿಫಾರಸ್ಸು ಮಾಡಲಿದೆ.
ಈ ಸ್ಪರ್ಧಿಗಳನ್ನು ವೈಯಕ್ತಿಕವಾಗಿ ಸಂದರ್ಶನ ಮಾಡಿ ನಂತರವಷ್ಟೇ ನೂತನ ಆಯ್ಕೆಗಾರರನ್ನು ಘೋಷಣೆ ಮಾಡಲಿದೆ. ಮಾಜಿ ಆಟಗಾರರಾದ ಮದನ್ ಲಾಲ್, ಆರ್ ಪಿ ಸಿಂಗ್ ಮತ್ತು ಸುಲಕ್ಷಣ ನಾಯಕ್ ಒಳಗೊಂಡ ಸಮಿತಿ ಆಯ್ಕೆಗಾರರ ನೇಮಕ ಮಾಡಲಿದೆ. ಈಗಾಗಲೇ ಈ ಹುದ್ದೆಗಳಿಗೆ ಒಟ್ಟು 44 ಮಂದಿ ಅರ್ಜಿ ಸಲ್ಲಿಸಿದ್ದಾರೆ.