Publish Date: Mon, 02 Mar 2020 (09:40 IST)
Updated Date: Mon, 02 Mar 2020 (09:45 IST)
ಚೆನ್ನೈ: ಇನ್ನೇನು ಈ ವರ್ಷದ ಐಪಿಎಲ್ ಸೀಸನ್ ಶುರುವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಮುಂಗಡ ತಯಾರಿ ನಡೆಸಲು ಚೆನ್ನೈಗೆ ಬಂದಿಳಿದಿದ್ದಾರೆ.
ಧೋನಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೇ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಸ್ವಾಗತ ಕೋರಿದ್ದಾರೆ. ಇಂದಿನಿಂದ ಧೋನಿ ಚೆನ್ನೈನಲ್ಲಿ ಐಪಿಎಲ್ ಗಾಗಿ ಅಭ‍್ಯಾಸ ಶುರು ಮಾಡಲಿದ್ದಾರೆ.
ಏಕದಿನ ವಿಶ್ವಕಪ್ ಮುಗಿದ ಬಳಿಕ ಧೋನಿ ಮೈದಾನದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಹೀಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ತಲೈವಾ ಆಟವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿಯೇ ಧೋನಿಯನ್ನು ವಿಮಾನ ನಿಲ್ದಾಣದಲ್ಲಿಯೇ ಜೈಕಾರ ಹಾಕಿ ಬರಮಾಡಿಕೊಂಡಿದ್ದಾರೆ.