Publish Date: Sat, 15 Feb 2020 (09:06 IST)
Updated Date: Sat, 15 Feb 2020 (09:07 IST)
ಬೆಂಗಳೂರು: ಇದ್ದಕ್ಕಿದ್ದಂತೆ ತನಗೂ ಹೇಳದೇ ಆರ್ ಸಿಬಿ ಲೋಗೋ ಬದಲಾಯಿಸುತ್ತಿರುವ ಕುರಿತು ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ನಾಯಕ ವಿರಾಟ್ ಕೊಹ್ಲಿ ಈಗ ಸಂತುಷ್ಟರಾಗಿ ಟ್ವೀಟ್ ಮಾಡಿದ್ದಾರೆ.
ಏನಾಗುತ್ತಿದೆ? ನಾಯಕನಿಗೂ ಗೊತ್ತಾಗದೇ ಎಂದು ಕೊಹ್ಲಿ ಇದ್ದಕ್ಕಿದ್ದ ಹಾಗೆ ಆರ್ ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಂದ ಲೋಗೋ ತೆಗೆದಾಗ ಅಸಮಾಧನ ಹೊರಹಾಕಿದ್ದರು.
ಆದರೆ ಇದೀಗ ಆರ್ ಸಿಬಿ ಹೊರ ಲಾಂಛನ ಪ್ರಕಟಿಸುತ್ತಿದ್ದಂತೇ ಮುನಿಸು ಮರೆತ ಕೊಹ್ಲಿ ಟ್ವಿಟರ್ ಮೂಲಕವೇ ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ, ಹೊಸ ಲೋಗೋ ನಮ್ಮ ನಿರ್ಭೀತರಾಗಿ ಕ್ರಿಕೆಟ್ ಆಡುವ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.