Select Your Language

Notifications

webdunia
webdunia
webdunia
webdunia

ಐಪಿಎಲ್ ಬಹುಮಾನ ಮೊತ್ತ ಕಡಿತ: ಕಾರಣವೇನು ಗೊತ್ತಾ?

ಐಪಿಎಲ್ ಬಹುಮಾನ ಮೊತ್ತ ಕಡಿತ: ಕಾರಣವೇನು ಗೊತ್ತಾ?
ಮುಂಬೈ , ಬುಧವಾರ, 4 ಮಾರ್ಚ್ 2020 (10:48 IST)
ಮುಂಬೈ: ದೇಶದಲ್ಲಿ ಆರ್ಥಿಕ ಹಿಂಜರಿತ ಹಲವು ಉದ್ಯಮಗಳನ್ನು ಕಂಗೆಡಿಸಿರುವುದಷ್ಟೇ ಅಲ್ಲ. ಶ್ರೀಮಂತ ಕ್ರೀಡಾಕೂಟವೆಂದೇ ಕರೆಯಿಸಿಕೊಳ್ಳುವ ಐಪಿಎಲ್ ಗೂ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ.


ಐಪಿಎಲ್ ನಲ್ಲಿ ಬಹುಮಾನ ಮೊತ್ತ ಸೇರಿದಂತೆ ಹಲವು ರೀತಿಯಲ್ಲಿ ವೆಚ್ಚ ಕಡಿತ ಮಾಡಲು ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಈಗಾಗಲೇ ಆರಂಭಿಕ ಕಾರ್ಯಕ್ರಮ ರದ್ದುಗೊಳಿಸಿರುವ ಐಪಿಎಲ್ ಆಡಳಿತ ಮಂಡಳಿ ಪ್ಲೇ ಆಫ್ ಹಂತದ ಬಹುಮಾನ ಮೊತ್ತದಲ್ಲಿ ಶೇ.50 ರಷ್ಟು ಕಡಿತ ಮಾಡಲಿದೆ.

ಕಳೆದ ಬಾರಿ ಐಪಿಎಲ್ ಗೆದ್ದ ತಂಡಕ್ಕೆ 20 ಕೋಟಿ ರೂ., ರನ್ನರ್ ಅಪ್ ಆದ ತಂಡಕ್ಕೆ 10 ಕೋಟಿ ರೂ. ಬಹುಮಾನ ಲಭಿಸಿತ್ತು. ಆದರೆ ಈ ಬಾರಿ ಗೆದ್ದ ತಂಡ 10 ಕೋಟಿ ರೂ., ರನ್ನರ್ ಅಪ್ ಆದ ತಂಡ 5 ಕೋಟಿ ರೂ.ಗಳಷ್ಟೇ ಜೇಬಿಗಿಳಿಸಲಿದೆ. ಈ ಮೂಲಕ ವೆಚ್ಚ ಕಡಿತಕ್ಕೆ ಯೋಜನೆ ರೂಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಶ್ರೇಯಾಂಕದಲ್ಲಿ ನಂ.1 ಆದ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಿಫಾಲಿ ವರ್ಮ