Select Your Language

Notifications

webdunia
webdunia
webdunia
webdunia

ಟಿ20 ಶ್ರೇಯಾಂಕದಲ್ಲಿ ನಂ.1 ಆದ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಿಫಾಲಿ ವರ್ಮ

ಟಿ20 ಶ್ರೇಯಾಂಕದಲ್ಲಿ ನಂ.1 ಆದ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಿಫಾಲಿ ವರ್ಮ
ದುಬೈ , ಬುಧವಾರ, 4 ಮಾರ್ಚ್ 2020 (10:23 IST)
ದುಬೈ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮ ಟಿ20 ವಿಶ್ವಕಪ್ ನಲ್ಲಿ ನೀಡುತ್ತಿರುವ ಅದ್ಭುತ ಪ್ರದರ್ಶನದಿಂದಾಗಿ ಐಸಿಸಿ ಟಿ20 ಮಹಿಳಾ ಕ್ರಿಕೆಟ್ ರ್ಯಾಂಕಿಂಗ್ ನ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ನಂ.1 ಆಗಿ ಹೊರಹೊಮ್ಮಿದ್ದಾರೆ.


ಈ ಮೂಲಕ ಮಹಿಳಾ ತಂಡದ ಸೆಹ್ವಾಗ್ ಎಂದೇ ಕರೆಯಿಸಿಕೊಳ್ಳುವ ಶಿಫಾಲಿ ವರ್ಮ ಮಿಥಾಲಿ ರಾಜ್ ಬಳಿಕ ಟಿ20 ರ್ಯಾಂಕಿಂಗ್ ನಲ್ಲಿ ನಂ.1 ಪಟ್ಟಕ್ಕೇರಿದ ಭಾರತೀಯ ಆಟಗಾರ್ತಿ ಎಂಬ ಗರಿಮೆಗೆ ಪಾತ್ರರಾದರು.

ನಿರ್ಭೀತ ಕ್ರಿಕೆಟ್ ನಿಂದಾಗಿ ಸುದ್ದಿಯಲ್ಲಿರುವ ಶಿಫಾಲಿ ಈ ವಿಶ್ವಕಪ್ ಕೂಟದ ಪ್ರತಿಯೊಂದು ಪಂದ್ಯದಲ್ಲೂ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಎದುರಾಳಿ ಯಾರೇ ಇರಲಿ, ಯದ್ವಾ ತದ್ವಾ ಬ್ಯಾಟಿಂಗ್ ನಡೆಸಿ ಜಯ ಕಸಿದುಕೊಳ್ಳುವ ತಾಕತ್ತು ವರ್ಮರದ್ದು. ಈ ಆಟಗಾರ್ತಿಯ ಸಾಧನೆ ನಿಜಕ್ಕೂ ಮೆಚ್ಚುವಂತದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ: ಒಲಿಂಪಿಕ್ಸ್ ರದ್ದಾದರೆ ಜಪಾನ್ ಗೆ ಲಕ್ಷ ಕೋಟಿ ನಷ್ಟ