Select Your Language

Notifications

webdunia
webdunia
webdunia
webdunia

ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಕುತ್ತು

ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಕುತ್ತು
ಮುಂಬೈ , ಸೋಮವಾರ, 30 ಮಾರ್ಚ್ 2020 (09:36 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಸದ್ಯಕ್ಕೆ ಯಾವುದೇ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿಲ್ಲ. ಜತೆಗೆ ಆಸ್ಟ್ರೇಲಿಯಾವಂತೂ ಮುಂದಿನ ಆರು ತಿಂಗಳು ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿದೆ.


ಇದರಿಂದಾಗಿ ಅಕ್ಟೋಬರ್ ನಲ್ಲಿ ಭಾರತ ಪ್ರವಾಸ ಮಾಡಬೇಕಿರುವ ಆಸೀಸ್ ಗೆ ಈ ನಿಯಮ ಅಡ್ಡಿಯಾಗಲಿದೆ. ಕೊರೋನಾ ಪರಿಸ್ಥಿತಿ ಸುಧಾರಿಸದೇ ಇದ್ದರೆ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡದು.

ಇದರಿಂದಾಗಿ ಅಕ್ಟೋಬರ್ ನಲ್ಲಿ ಆರಂಭವಾಗಲಿರುವ ಟಿ20 ಮತ್ತು ಡಿಸೆಂಬರ್ ನಲ್ಲಿ ಟೆಸ್ಟ್ ಸರಣಿಯೂ ರದ್ದಾಗುವ ಸಾ‍ಧ್ಯತೆಯಿದೆ. ಈ ನಡುವೆ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಬೇಕಿದ್ದು, ಅದರ ಭವಿಷ್ಯವೂ ಅತಂತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆಲ್ಲಿಸಿಕೊಟ್ಟ ಟೀಂ ಇಂಡಿಯಾ ಕ್ರಿಕೆಟಿಗ ಈಗ ಕೊರೋನಾ ಕರ್ತವ್ಯದಲ್ಲಿ!