ನವದೆಹಲಿ: ಇಟೆಲಿಯಲ್ಲಿ ನಿನ್ನೆ ವಿವಾಹ ಮಾಡಿಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯ ನಂತರವೂ ಕೊಹ್ಲಿ ಊರು ದೆಹಲಿಯಲ್ಲಿ ವಾಸಮಾಡಲ್ವಂತೆ!
ಹಾಗಿದ್ದರೆ ವಿವಾಹ ನಂತರವೂ ವಿದೇಶದಲ್ಲಿ ನೆಲೆಸ್ತಾರಾ ಕೊಹ್ಲಿ? ಹಾಗೇನೂ ಇಲ್ಲ. ಈಗಾಗಲೇ ಮದುವೆಯಾದ ಮೇಲೆ ತಮ್ಮ ದಾಂಪತ್ಯ ಜೀವನ ಕಳೆಯಲು ಕೊಹ್ಲಿ ಮತ್ತು ಅನುಷ್ಕಾ ಮುಂಬೈಯ ವರ್ಲಿಯಲ್ಲಿ ಸುಂದರ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಅಲ್ಲಿಯೇ ಇವರಿಬ್ಬರೂ ಹೊಸ ಜೀವನ ಪ್ರಾರಂಭಿಸಲಿದ್ದಾರಂತೆ. ಇಟೆಲಿಯಲ್ಲಿ ವಿವಾಹದ ಸಂಭ್ರಮ ಕಳೆದ ಮೇಲೆ ಕೆಲ ಕಾಲ ವಿದೇಶದಲ್ಲಿ ಕಾಲ ಕಳೆಯಲಿರುವ ಜೋಡಿ ನಂತರ ದ. ಆಫ್ರಿಕಾ ಪ್ರವಾಸ ತೆರಳಲಿದೆ. ಇಲ್ಲಿ ಕ್ರಿಕೆಟ್ ಸರಣಿಗಾಗಿ ಕೊಹ್ಲಿ ತೆರಳುವಾಗ ಅನುಷ್ಕಾ ಕೂಡಾ ಜತೆಯಾಗಲಿದ್ದಾರೆ. ಇದಾದ ಬಳಿಕ ಅನುಷ್ಕಾ ಭಾರತಕ್ಕೆ ಮರಳಲಿದ್ದು, ತಮ್ಮ ಸಿನಿಮಾ ಡೇಟ್ಸ್ ಗಳಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ