Publish Date: Fri, 24 Aug 2018 (08:32 IST)
Updated Date: Fri, 24 Aug 2018 (08:33 IST)
ಟ್ರೆಂಟ್ ಬ್ರಿಡ್ಜ್: ತೃತೀಯ ಟೆಸ್ಟ್ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನಾವು ಅತ್ಯುತ್ತಮ ಪ್ರವಾಸಿ ತಂಡ ಎನಿಸಿಕೊಳ್ಳಲು ಹೆಚ್ಚು ಕಾಲ ಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದರ ಜತೆಗೆ ತಮ್ಮ ತಂಡ ಮೊದಲ ಎರಡು ಟೆಸ್ಟ್ ಪಂದ್ಯ ಸೋತಾಗ ಮಾಜಿ-ಹಾಲಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು ಮಾಡಿದ ಟೀಕೆಗಳ ಬಗ್ಗೆ ನಿಮಗೇನಾದರೂ ಗೊತ್ತಾ ಎಂದು ಕೇಳಿದಾಗ ನಮಗೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದಿದ್ದಾರೆ ರವಿಶಾಸ್ತ್ರಿ.
ಖಾಸಗಿ ಮಾಧ‍್ಯಮವೊಂದಕ್ಕೆ ಸಂದರ್ಶನ ನೀಡಿರುವ ಶಾಸ್ತ್ರಿ ನಾವು ಮಾಧ‍್ಯಮ ವರದಿಗಳನ್ನು ಓದುತ್ತಲೇ ಇರಲಿಲ್ಲ. ಹಾಗಾಗಿ ನಮಗೆ ಜಗತ್ತಿನಲ್ಲಿ ಇರುವವರು ಏನೆಲ್ಲಾ ಟೀಕೆ ಮಾಡುತ್ತಿದ್ದಾರೆ ಎಂದು ಗೊತ್ತೇ ಆಗುತ್ತಿರಲಿಲ್ಲ ಎಂದಿದ್ದಾರೆ. ಅದೆಲ್ಲಾ ಏನೇ ಇದ್ದರೂ ಮೊದಲ ಎರಡು ಸೋಲಿನ ನಂತರ ನನ್ನ ಹುಡುಗರು ಮೇಲೆದ್ದು ಬಂದ ಪರಿಗೆ ನನಗೆ ಹೆಮ್ಮೆಯಿದೆ ಎಂದು ಕೋಚ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.