Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕೇರಳದ ಪ್ರವಾಹ ಪೀಡಿತರಿಗಾಗಿ ಮಿಡಿಯಿತು ಭಾರತೀಯ ಕ್ರೀಡಾಳುಗಳ ಹೃದಯ

webdunia
ಭಾನುವಾರ, 19 ಆಗಸ್ಟ್ 2018 (08:47 IST)
ನವದೆಹಲಿ: ಕೇರಳದಲ್ಲಿ ಹಿಂದೆಂದೂ ಕಾಣದ ಪ್ರವಾಹದಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದೆ.

ಹೀಗಾಗಿ ಕೇರಳದ ಪ್ರವಾಹ ಸಂತ್ರಸ್ತರಿಗಾಗಿ ಸಿನಿಮಾ, ರಾಜಕೀಯ, ಸಾಮಾಜಿಕ ಸಂಘಗಳ ಸದಸ್ಯರು ನೆರವಿಗೆ ಬರುತ್ತಿದ್ದಾರೆ. ಅವರ ಜತೆಗೆ ಭಾರತದ ಖ್ಯಾತ ಕ್ರೀಡಾಳುಗಳೂ ತಮ್ಮ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕೇರಳದ ಜನತೆ ಆದಷ್ಟು ಸುರಕ್ಷಿತರಾಗಿರಿ. ಅವರ ಸಹಾಯಕ್ಕೆ ಧಾವಿಸುತ್ತಿರುವ ಸೇನೆ, ಎನ್ ಡಿಆರ್ ಎಫ್ ಸಿಬ್ಬಂದಿಗೆ ಧನ್ಯವಾದಗಳು ಎಂದಿದ್ದಾರೆ.

ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡಾ ಟ್ವೀಟ್ ಮಾಡಿದ್ದು, ಕೇರಳದ ಪ್ರವಾಹ ಪೀಡಿತರ ಸುರಕ್ಷತೆಗಾಗಿ ಪ್ರಾರ್ಥಿಸುವೆ ಎಂದಿದ್ದಾರೆ. ಇನ್ನು ಇನ್ನೋರ್ವ ಕ್ರಿಕೆಟಿಗರಾದ ರವಿಚಂದ್ರನ್ ಅಶ್ವಿನ್, ವೀರೇಂದ್ರ ಸೆಹ್ವಾಗ್‍ ಕೂಡಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರವಾಹ ಪೀಡಿತರ ಸುರಕ್ಷತೆಗೆ ಪ್ರಾರ್ಥಿಸುವುದರ ಜತೆಗೆ ಸಹಾಯವಾಣಿಗಳ ಸಂಖ್ಯೆಯನ್ನೂ ಪ್ರಕಟಿಸುವ ಮೂಲಕ ತಮ್ಮ ಕೈಲಾದ ರೀತಿಯಲ್ಲಿ ನೆರವಾಗಲು ಪ್ರಯತ್ನಿಸಿದ್ದಾರೆ. ಕ್ರಿಕೆಟಿಗರಾದ ಶಿಖರ್ ಧವನ್, ರೋಹಿತ್ ಶರ್ಮಾ ಮುಂತಾದವರೂ ಸಂತಾಪ ವ್ಯಕ್ತಪಡಿಸಿದ ಟ್ವೀಟ್ ಮಾಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ತಂಡದಲ್ಲಿ ಯಾರ ಸ್ಥಾನಕ್ಕೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ಕೊಹ್ಲಿ ಖಡಕ್ ಆಗಿ ಹೇಳಿದ್ಯಾಕೆ?