Publish Date: Fri, 17 Aug 2018 (15:02 IST)
Updated Date: Fri, 17 Aug 2018 (15:05 IST)
ದುಬೈ: ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾ ಮುಖಿಯಾಗಲಿವೆ. ಇದಕ್ಕೂ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕ್ ನಾಯಕ ಸರ್ಫ್ರಾಜ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
‘ಭಾರತ ಕ್ರಿಕೆಟ್ ತಂಡ ಪ್ರಬಲ ತಂಡವೇ ಆಗಿರಬಹುದು. ಆದರೆ ನಮ್ಮ ಕ್ರಿಕೆಟ್ ತಂಡಕ್ಕೆ ದುಬೈಯಲ್ಲಿ ಆಡಿದ ಅನುಭವ ಟೀಂ ಇಂಡಿಯಾಕ್ಕಿಂತ ಹೆಚ್ಚೇ ಇದೆ. ಹೀಗಾಗಿ ಇಲ್ಲಿನ ಪರಿಸ್ಥಿತಿ ಹೇಗೆ ಎಂಬುದು ಅವರಿಗಿಂತ ಚೆನ್ನಾಗಿ ನಮಗೆ ಗೊತ್ತು’ ಎಂದು ಸರ್ಫ್ರಾಜ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 3 ರಿಂದ ದುಬೈನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಆರಂಭವಾಗಲಿದ್ದು, 19 ರಂದು ಉಭಯ ತಂಡಗಳು ಸೆಣಸಲಿವೆ. ಈ ಪಂದ್ಯಕ್ಕಾಗಿ ನಮ್ಮ ಆಟಗಾರರ ಫಿಟ್ನೆಸ್ ಲೆವೆಲ್ ಕಾಯ್ದುಕೊಳ್ಳುವುದೇ ನಮ್ಮ ಸದ್ಯದ ಪ್ರಮುಖ ಆದ್ಯತೆಯಾಗಲಿದೆ ಎಂದು ಪಾಕ್ ನಾಯಕ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.