Publish Date: Wed, 15 Aug 2018 (08:49 IST)
Updated Date: Wed, 15 Aug 2018 (08:50 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 159 ರನ್ ಗಳ ಬೃಹತ್ ಅಂತರದಿಂದ ಸೋತ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕೋಲಾಹಲವೇ ನಡೆದಿತ್ತೇ?
ಕ್ರೀಡಾ ವಾಹಿನಿಯೊಂದರ ಪ್ರಕಾರ ಸೋಲಿನ ಬಳಿಕ ಲಾರ್ಡ್ಸ್ ಡ್ರೆಸ್ಸಿಂಗ್ ರೂಂನ ಟೀಂ ಇಂಡಿಯಾ ಕೊಠಡಿ ಕೆಲವು ನಿಮಿಷಗಳ ಕಾಲ ಬಾಗಿಲು ಬಂದ್ ಆಗಿತ್ತು. ಈ ಸಂದರ್ಭದಲ್ಲಿ ಕೋಚ್ ಮತ್ತು ನಾಯಕ ತಮ್ಮ ಆಟಗಾರರಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ಉಳಿಯಬೇಕೆಂದರೆ ಜವಾಬ್ಧಾರಿಯಿಂದ, ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ ಎಂದು ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ತಾಕೀತು ಮಾಡಿದ್ದಾರೆ ಎಂದು ವಾಹಿನಿ ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.