Publish Date: Fri, 17 Aug 2018 (10:07 IST)
Updated Date: Fri, 17 Aug 2018 (10:08 IST)
ಲಂಡನ್: ದ್ವಿತೀಯ ಟೆಸ್ಟ್ ಸಂದರ್ಭದಲ್ಲಿ ಬೆನ್ನು ನೋವಿಗೊಳಗಾಗಿದ್ದ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಗೆ ಫಿಟ್ ಆಗಿದ್ದು, ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಗೆ ಕೊಹ್ಲಿ ಏಕೈಕ ಆಶಾಕಿರಣವಾಗಿದ್ದರು. ಆದರೆ ದ್ವಿತೀಯ ಟೆಸ್ಟ್ ಪಂದ್ಯದ ನಡುವೆ ಬೆನ್ನು ನೋವಿಗೆ ಒಳಗಾದಾಗ ಅವರು ಮೂರನೇ ಟೆಸ್ಟ್ ಗೆ ಲಭ್ಯರಾಗುತ್ತಾರೋ ಇಲ್ಲವೋ ಎಂದು ಅನುಮಾನ ಮೂಡಿತ್ತು.
ಆದರೆ ನಿನ್ನೆ ಕೊಹ್ಲಿ ಅಭ್ಯಾಸಕ್ಕಿಳಿದಿದ್ದು, ಮೂರನೇ ಟೆಸ್ಟ್ ಆಡಲು ಕಾಯುತ್ತಿದ್ದೇನೆಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ತಾವು ಆಡುವ ಬಗ್ಗೆ ಇದ್ದ ಅನುಮಾನಗಳನ್ನು ದೂರ ಮಾಡಿದ್ದಾರೆ. ಇದು ಟೀಂ ಇಂಡಿಯಾ ಪಾಲಿಗೆ ಶುಭ ಸುದ್ದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.