Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ

ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ
ಮುಂಬೈ , ಗುರುವಾರ, 16 ಆಗಸ್ಟ್ 2018 (09:52 IST)
ಮುಂಬೈ: ಟೀಂ ಇಂಡಿಯಾಕ್ಕೆ ಮೊದಲ ಬಾರಿಗೆ ವಿದೇಶೀ ನೆಲದಲ್ಲಿ ಗೆಲುವು ಕೊಡಿಸಿದ ಖ್ಯಾತಿಯ ನಾಯಕ  ಅಜಿತ್ ವಾಡೇಕರ್ ಇನ್ನಿಲ್ಲವಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಬಹುಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.

1970 ರ ದಶಕದಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ಗೆಲುವು ಕೊಡಿಸಿದ ಕೀರ್ತಿ ವಾಡೇಕರ್ ಅವರದ್ದಾಗಿತ್ತು. ಆ ಕಾಲದಲ್ಲಿ ಇವೆರಡೂ ದೈತ್ಯ ತಂಡಗಳನ್ನು ಸೋಲಿಸುವುದೆಂದರೆ ಸುಲಭದ ಮಾತಾಗಿರಲಿಲ್ಲ. ಒಟ್ಟು 37 ಟೆಸ್ಟ್ ಪಂದ್ಯಗಳನ್ನಾಡಿದ್ದ ವಾಡೆಕರ್ 2113 ರನ್ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೆಟ್ಟ ಮೇಲೂ ಬುದ್ಧಿ ಕಲಿಯದ ಟೀಂ ಇಂಡಿಯಾ ಮಾಡುತ್ತಿರುವುದೇನು?