Publish Date: Thu, 16 Aug 2018 (08:34 IST)
Updated Date: Thu, 16 Aug 2018 (08:35 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬಗ್ಗೆ ಇದೀಗ ಮಾಜಿ, ಹಾಲಿ ಕ್ರಿಕೆಟಿಗರೂ ಸೇರಿದಂತೆ ಎಲ್ಲರೂ ಜಾಡಿಸುವವರೇ. ಇದೀಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೋಚ್ ರವಿಶಾಸ್ತ್ರಿ ಮೇಲೆ ಕೆಂಡ ಕಾರಿದ್ದಾರೆ.
ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕೋಚ್ ರವಿಶಾಸ್ತ್ರಿ ಕೂಡಾ ಜವಾಬ್ಧಾರಿ ಹೊರಬೇಕು. ಪ್ರದರ್ಶನದ ಬಗ್ಗೆ ಅವರು ಉತ್ತರ ಕೊಡಬೇಕು ಎಂದು ಹರ್ಭಜನ್ ಸಿಂಗ್ ಆಗ್ರಹಿಸಿದ್ದಾರೆ.
ಈ ಸರಣಿ ಆರಂಭಕ್ಕೆ ಮೊದಲು ಕೋಚ್ ರವಿಶಾಸ್ತ್ರಿ ನಮಗೆ ಪಿಚ್, ಪರಿಸ್ಥಿತಿ ಪರಿಣಾಮವಾಗುವುದಿಲ್ಲ ಎಂದು ಕೊಚ್ಚಿಕೊಂಡಿದ್ದರು. ‘ಇಂದಲ್ಲ ನಾಳೆ ಕೋಚ್ ಉತ್ತರ ಕೊಡಲೇಬೇಕು. ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನೆಂದು ರವಿಶಾಸ್ತ್ರಿಯೇ ಸ್ಪಷ್ಟಪಡಿಸಬೇಕು’ ಎಂದು ಭಜಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.