Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಕಿತ್ತೊಗೆಯಿರಿ, ರಾಹುಲ್ ದ್ರಾವಿಡ್ ಕರೆತನ್ನಿ ಅಭಿಯಾನ ಶುರು!

ರವಿಶಾಸ್ತ್ರಿ ಕಿತ್ತೊಗೆಯಿರಿ, ರಾಹುಲ್ ದ್ರಾವಿಡ್ ಕರೆತನ್ನಿ ಅಭಿಯಾನ ಶುರು!
ಲಂಡನ್ , ಬುಧವಾರ, 15 ಆಗಸ್ಟ್ 2018 (10:59 IST)
ಲಂಡನ್: ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ನಂತರ ಕೋಚ್ ರವಿಶಾಸ್ತ್ರಿ ಪದಚ್ಯುತಿಗೆ ಅಭಿಮಾನಿಗಳ ಒತ್ತಾಯ ಹೆಚ್ಚಾಗುತ್ತಿದೆ.
 

ಇದೀಗ ಟ್ವಿಟರಿಗರು ರವಿಶಾಸ್ತ್ರಿ ಕಿತ್ತೊಗೆಯಿರಿ, ರಾಹುಲ್ ದ್ರಾವಿಡ್ ಕರೆ ತನ್ನಿ ಎಂದು ಅಭಿಯಾನವನ್ನೇ ಶುರು ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ರವಿಶಾಸ್ತ್ರಿ ಕೈಯಿಂದ ಸಾಧ್ಯವಾಗುತ್ತಿಲ್ಲ. ಬಿಸಿಸಿಐನವರೇ ದಯವಿಟ್ಟು ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ರನ್ನು ಸರಣಿಯ ಉಳಿದ ಪಂದ್ಯಗಳಿಗೆ ಕೋಚ್ ಆಗಿ ಆಯ್ಕೆ ಮಾಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದಿಂದ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಮೇಲೆ ಬಿಸಿಸಿಐ ಕೂಡಾ ಸಿಟ್ಟಿಗೆದ್ದಿದೆ. ಈ ಸರಣಿ ಮುಗಿದ ಬಳಿಕ ಇವರಿಬ್ಬರಿಂದ ವಿವರಣೆ ಕೇಳಲಿದೆ ಎಂದು ವರದಿಯಾಗಿದೆ. ಅದರ ಬೆನ್ನಲ್ಲೇ ಅಭಿಮಾನಿಗಳು ದ್ರಾವಿಡ್ ಗಾಗಿ ಅಭಿಯಾನವನ್ನೇ ಶುರು ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಹುದ್ದೆಯಿಂದ ಸಚಿನ್, ಗಂಗೂಲಿ, ಲಕ್ಷ್ಮಣ್ ಗೆ ಕೊಕ್?!