Select Your Language

Notifications

webdunia
webdunia
webdunia
webdunia

ಸೊರಗಿರುವ ಟೀಂ ಇಂಡಿಯಾಕ್ಕೆ ಬಂತೊಂದು ಗುಡ್ ನ್ಯೂಸ್

ಜಸ್ಪ್ರೀತ್ ಬುಮ್ರಾ
ಲಂಡನ್: ಇಂಗ್ಲೆಂಡ್ ವಿರುದ್ಧ  ಎರಡು ಟೆಸ್ಟ್ ಸೋತು ಹೀನಾಯ ಸ್ಥಿತಿಯಲ್ಲಿರುವ ಟೀಂ ಇಂಡಿಯಾಕ್ಕೆ ಶುಭ ಸುದ್ದಿಯೊಂದು ಸಿಕ್ಕಿದೆ.
 

ಗಾಯದಿಂದಾಗಿ ಟಿ20, ಏಕದಿನ ಸರಣಿಯಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ ಆಗಿದ್ದು ಮೂರನೇ ಟೆಸ್ಟ್ ವೇಳೆಗೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರ ಜತೆಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ಫಿಟ್ ಆಗಿದ್ದಾರೆ ಎಂದು ಟೀಂ ಇಂಡಿಯಾ ವೈದ್ಯಕೀಯ ತಂಡ ಘೋಷಿಸಿದೆ.

ಆದರೆ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಂದಿಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ಕೊಹ್ಲಿ ಆಗಸ್ಟ್ 18 ರಿಂದ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎನ್ನುವುದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ರವಿಶಾಸ್ತ್ರಿ ಮಾತಾಡ್ಲೇಬೇಕು ಎಂದ ಹರ್ಭಜನ್ ಸಿಂಗ್