ಟ್ರೋಲ್ ಮಾಡಿದವನಿಗೆ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?

ಶುಕ್ರವಾರ, 17 ಆಗಸ್ಟ್ 2018 (09:18 IST)
ಮುಂಬೈ: ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾತ್ರಿ ವೇಳೆ ಟ್ವೀಟ್ ಮಾಡಿ ಶುಭಾಷಯ ಕೋರಿದ್ದಕ್ಕೆ ಟ್ರೋಲ್ ಮಾಡಿದ ವ್ಯಕ್ತಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಮಿಥಾಲಿ ರಾಜ್ ತಡ ರಾತ್ರಿ ವಿಶ್ ಮಾಡಿದ್ದು ನೋಡಿ ವ್ಯಕ್ತಿಯೊಬ್ಬ ಸ್ವಾತಂತ್ರ್ಯ ದಿನ ಯಾವತ್ತೋ ಕಳೆದುಹೋಯಿತು ಮೇಡಂ. ನೀವು ಒಬ್ಬ ಸೆಲೆಬ್ರಿಟಿಯಾಗಿ ಇಷ್ಟು ತಡವಾಗಿ ವಿಶ್ ಮಾಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದ.

ಇದಕ್ಕೆ ಟ್ವೀಟ್ ಮೂಲಕವೇ ಮಿಥಾಲಿ ತಿರುಗೇಟು ಕೊಟ್ಟಿದ್ದಾರೆ. ‘ನೀವು ನನ್ನನ್ನು ಸೆಲೆಬ್ರಿಟಿ ಎಂದು ಕರೆದಿದ್ದಕ್ಕೆ ಧನ್ಯವಾದಗಳು. ನಾನು 1999 ರಿಂದ ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೇವಲ ಅಥ್ಲೆಟ್ ಅಷ್ಟೇ. ಸದ್ಯಕ್ಕೆ ನಾನು ಚಾಲೆಂಜರ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದೇನೆ. ನನಗೆ ಮೈದಾನದಲ್ಲಿ ಅಥವಾ ಹೊರಗೆ ಫೋನ್ ವ್ಯವಸ್ಥೆ ಇರಲಿಲ್ಲ. ಅದಕ್ಕೇ ಈಗ ವಿಶ್ ಮಾಡುತ್ತಿದ್ದೇನೆ. ತಡವಾಗಿದ್ದಕ್ಕೆ ಇಷ್ಟು ಕಾರಣ ಸಾಕು ಎಂದುಕೊಳ್ಳುತ್ತೇನೆ’ ಎಂದು ಮಿಥಾಲಿ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆಯಾಗಲಿದೆಯಂತೆ