ನೀವು ಇನ್ನೂ ಹೆಚ್ಚು ನಗಬೇಕು ಎಂದ ಫಾಲೋವರ್ ಗೆ ಪ್ರಧಾನಿ ಮೋದಿ ಹೇಳಿದ್ದೇನು?!

ಸೋಮವಾರ, 23 ಜುಲೈ 2018 (09:10 IST)
ನವದೆಹಲಿ: ಸಂಸತ್ತಿನಲ್ಲಿ ಮೊನ್ನೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರಬೇಕಾದರೆ ಪ್ರಧಾನಿ ಮೋದಿ ನಕ್ಕಿದ್ದು ಭಾರೀ ವೈರಲ್ ಆಗಿತ್ತು. ಪ್ರಧಾನಿ ಮೋದಿ ನಗು ನೋಡಿ ಖುಷಿಯಾಗಿರುವ ಅಭಿಮಾನಿಯೊಬ್ಬರು ಇನ್ನೂ ನಗಬೇಕು ಎಂದು ಸಲಹೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ಶಿಲ್ಪಿ ಅಗರ್ವಾಲ್ ಎಂಬವರು ‘ಮೋದಿ ಜೀ ಬೇರೆಲ್ಲಾ ನಿಮ್ಮಿಂದ ಯಾವುದೇ ಸಮಸ್ಯೆಯಿಲ್ಲ. ನೀವು ಇನ್ನೂ ಹೆಚ್ಚು ನಗುತ್ತಿರಬೇಕು’ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ನಗುತ್ತಲೇ ಉತ್ತರಿಸಿರುವ ಪ್ರಧಾನಿ ಮೋದಿ ‘ಖಂಡಿತಾ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಸಂಸತ್ತಿನಲ್ಲಿ ತಮ್ಮ ಭಾಷಣವನ್ನು ಮೆಚ್ಚಿ ಅಭಿನಂದಿಸಿದ ಹಲವು ಫಾಲೋವರ್ ಗಳಿಗೂ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಶಿ ತರೂರ್ ಗೆ ಪರೋಕ್ಷ ಎಚ್ಚರಿಕೆ ಕೊಟ್ಟ ರಾಹುಲ್ ಗಾಂಧಿ