Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಅಪ್ಪುಗೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ರಾಹುಲ್ ಗಾಂಧಿ ಅಪ್ಪುಗೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಶಹಜಾನಪುರ , ಭಾನುವಾರ, 22 ಜುಲೈ 2018 (12:41 IST)
ಶಹಜಾನಪುರ : ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ರಾಹುಲ್ ಗಾಂಧಿ ತಮ್ಮನ್ನು ಅಪ್ಪಿಕೊಂಡಿರುವುದರ ಬಗ್ಗೆ ಪ್ರಧಾನಿ ಮೋದಿ ಅವರು ಶಹಜಾನಪುರದಲ್ಲಿ ನಡೆದ ಕಿಸಾನ್ ಕಲ್ಯಾಣ ರ್ಯಾಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯ ಸಂದರ್ಭದಲ್ಲಿ ತನಗೆ 'ಬೇಡವಾಗಿದ್ದ ಆಲಿಂಗನ'ವನ್ನು ರಾಹುಲ್ ಗಾಂಧಿ ಅವರು ನೀಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಕಾರಣಗಳನ್ನು ನೀಡುವಂತೆ ನಾವು ಕೇಳಿದ್ದೆವು,ಆದರೆ ಅದಕ್ಕೆ ವಿಫಲರಾದ ಅವರು ಬೇಡವಾದ ಆಲಿಂಗನವನ್ನು ನೀಡಿದರು ಎಂದು ಅವರು ಆರೋಪಿಸಿದ್ದಾರೆ.
ಹಾಗೇ ಬಿಜೆಪಿಯ ವಿರುದ್ಧ ಒಂದು 'ದಳ’ ಮಾತ್ರವಲ್ಲ,ಹಲವಾರು ಪಕ್ಷಗಳು ಸೇರಿಕೊಂಡಿವೆ. ಇವೆಲ್ಲವೂ 'ದಳ-ದಳ'ವನ್ನು ಸೃಷ್ಟಿಸುತ್ತವೆ ಮತ್ತು ಅದು 'ಕಮಲ'ವು ಅರಳಲು ನೆರವಾಗುತ್ತದೆ ಎಂದು ಮೋದಿ ಅವರು ತಿಳಿಸಿದ್ದಾರೆ.


ಪ್ರತಿಪಕ್ಷಗಳನ್ನು ತರಾಟೆಗೆತ್ತಿಕೊಂಡ ಅವರು,ಅವು ಬಡವರು,ಯುವಜನರು ಮತ್ತು ರೈತರನ್ನು ಕಡೆಗಣಿಸಿವೆ ಮತ್ತು ಪ್ರಧಾನಿ ಕುರ್ಚಿಯ ಹಿಂದೆ ಬಿದ್ದಿದ್ದಾರೆ ಎಂದು ಟೀಕಿಸಿದರು. ತಾನೇನಾದರೂ ತಪ್ಪು ಮಾಡಿದ್ದೇನೆಯೇ? ತಾನು ಕೇವಲ ಬಡವರು ಮತ್ತು ದೇಶಕ್ಕಾಗಿ ಶ್ರಮಿಸುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ. ಇದು ತನ್ನ ಅಪರಾಧವೇ? ಎಂದು ಅವರು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ