Publish Date: Sun, 22 Jul 2018 (18:25 IST)
Updated Date: Sun, 22 Jul 2018 (18:31 IST)
ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ನಾವೆಲ್ಲ ಅಖಂಡ ಕರ್ನಾಟಕದ ಅಬಿವೃದ್ಧಿ ಬಗ್ಗೆ ಚಿಂತೆ ಹರಿಸುವುದು ಬಿಟ್ಟು, ಪದೆ ಪದೆ ಪ್ರತ್ಯೇಕ ರಾಜ್ಯದ ಬಗ್ಗೆ ಹೇ
ಳಿಕೆ ನೀಡಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಬಿಜೆಪಿ ನಾಯಕರಿಗೆ ಸಚಿವ ಬಂಡೆಪ್ಪಕಾಶಂಪೂರ್ ಸಮಜಾಯಿಸಿದ್ದಾರೆ.
ಬೀದರ್ ನ ಪ್ರತಾಪ್ ನಗರದಲ್ಲಿಂದು ಸರ್ಕಾರಿ ನೌಕರರ ಜಿಲ್ಲಾಮಟ್ಟದ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಸಹಕಾರಿ ಸಚಿವ, ಬಿಜೆಪಿ ನಾಯಕರು ಪದೇ ಪದೇ ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆಗಳು ನೀಡುತ್ತ ವಿನಾಕಾರಣ ರಾಜ್ಯದ ಜನತೆಗೆ ಗೊಂದಲ ಸೃಷ್ಠಿಸುತ್ತಿದ್ದಾರೆ, ಬಿಜೆಪಿ ನಾಯಕರು ಹೀಗೆ ಗೊಂದಲ ಸೃಷ್ಠಿಸುವುದು ಸರಿಯಲ್ಲಾ ಎಂದು ಹೇಳಿದ್ರು. ಇನ್ನು ಸಮ್ಮಿಶ್ರ ಸರ್ಕಾರದ ಮನೆಯೊಂದು ಮೂರು ಬಾಗಿಲು ಎನ್ನುವ ವಿಚಾರವಾಗಿ ಪ್ರತಿಕ್ರಿಯೇ ನಿಡಿದ್ದು, ಬಿಜೆಪಿ ನಾಯಕರುಗಳು ಹತಾಶೆಯಲ್ಲಿ ಹೀಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ರು.
ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಮನೆಯು ಒಂದೆ ಬಾಗಿಲೂ ಒಂದೆ ಎಂದು ಪ್ರತಿಕ್ರಿಯೇ ನೀಡಿದ್ರು. ರೈತರ ಸಾಲಮನ್ನಾ ವಿಚಾರದಲ್ಲಿ ರೈತರ ಪರ ಚಿಂತನೆ ಮಾಡುವ ಸರ್ಕಾರ ಅಂದ್ರೆ ಅದು ನಮ್ಮ ಕರ್ನಾಟಕ ಸರ್ಕಾರ ಎಂದು ಹೇಳಿದ್ರು. ರೈತರಿಗಾಗಿ ಬಜೆಟ್ ನಲ್ಲಿ ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ಸಮ್ಮಿಶ್ರ ಸರ್ಕಾರಕ್ಕಿದೆ ಎಂದು ಹೇಳಿದ್ರು.