ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆಯಾಗಲಿದೆಯಂತೆ

ಶುಕ್ರವಾರ, 17 ಆಗಸ್ಟ್ 2018 (09:15 IST)
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತು ಟೀಕೆಗೆ ಗುರಿಯಾಗಿರುವ ಟೀಂ ಇಂಡಿಯಾ ನಾಳೆಯಿಂದ ಮೂರನೇ ಟೆಸ್ಟ್ ಗೆ ಅಣಿಯಾಗುತ್ತಿದೆ.
 

ಎರಡು ಟೆಸ್ಟ್ ಪಂದ್ಯಗಳಲ್ಲಿ ತಂಡದ ಆಟಗಾರರ ಆಯ್ಕೆ ವಿಚಾರದಲ್ಲಿ ಟೀಕೆಗೊಳಗಾಗಿದ್ದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಮತ್ತೆ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಅದರಲ್ಲೂ ಮುಖ್ಯವಾಗಿ ವಿಕೆಟ್ ಕೀಪಿಂಗ್ ನಲ್ಲಿ ವೈಫಲ್ಯ ಅನುಭವಿಸಿರುವ ದಿನೇಶ್ ಕಾರ್ತಿಕ್ ಬದಲಿಗೆ ಯುವ ಕ್ರಿಕೆಟಿಗ ರಿಷಬ್ ಪಂತ್ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಇನ್ನು, ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ ಆಗಿ ಮರಳಿರುವುದರಿಂದ ಉಮೇಶ್ ಯಾದವ್ ಬದಲಿಗೆ ಅವರು ಸ್ಥಾನ ಪಡೆಯಲಿದ್ದಾರೆ. ಆದರೆ ಅವರಿಗಾಗಿ ತಂಡದಲ್ಲಿ ಕುಲದೀಪ್ ಯಾದವ್ ಸ್ಥಾನ ಬಿಟ್ಟುಕೊಡಬೇಕಾಗಿ ಬರಬಹುದು.  ಆರಂಭಿಕ ಸ್ಥಾನದಲ್ಲಿ ಶಿಖರ್ ಧವನ್ ಮತ್ತೆ ತಂಡಕ್ಕೆ ಮರಳಿದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ ವಾಜಪೇಯಿಯನ್ನು ಕ್ರಿಕೆಟಿಗ ಸೆಹ್ವಾಗ್ ಸ್ಮರಿಸಿದ್ದು ಹೀಗೆ!