Publish Date: Fri, 10 Aug 2018 (09:22 IST)
Updated Date: Fri, 10 Aug 2018 (09:23 IST)
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಾಗ ಟ್ವಿಟರ್ ನಲ್ಲಿ ಮಾಡುವ ಟ್ವೀಟ್ ಗಳಿಂದಲೇ ಸುದ್ದಿಯಾಗುತ್ತಾರೆ. ಇದೀಗ ಮತ್ತೊಮ್ಮೆ ಟ್ವಿಟರ್ ನಲ್ಲಿ ಸುಷ್ಮಾ ಕೊಟ್ಟ ಉತ್ತರ ವೈರಲ್ ಆಗಿದೆ.
ವಿದೇಶಾಂಗ ಸಚಿವೆ ಸುಷ್ಮಾ ಹಲವು ಸಮಸ್ಯೆಗಳಿಗೆ ಟ್ವಿಟರ್ ನಲ್ಲೇ ಪರಿಹಾರ ಒದಗಿಸುತ್ತಾರೆ. ಇದೇ ಕಾರಣಕ್ಕೋ ಏನೋ ವ್ಯಕ್ತಿಯೊಬ್ಬ ಮುಂದಿನ ವಾರ ಬಾಲಿಗೆ ಭೇಟಿ ನೀಡುವುದು ಸುರಕ್ಷಿತವೇ ಎಂದು ಪ್ರಶ್ನೆ ಮಾಡಿದ್ದ.
ಇದಕ್ಕೆ ಸ್ವಾರಸ್ಯಕರವಾಗಿ ಸುಷ್ಮಾ ಉತ್ತರ ಕೊಟ್ಟಿದ್ದಾರೆ. ‘ಬಹುಶಃ ನಾನು ಅಲ್ಲಿನ ಅಗ್ನಿಪರ್ವತದ ಬಳಿ ಕೇಳಿ ಹೇಳಬೇಕಷ್ಟೇ’ ಎಂದು ಟ್ವೀಟ್ ತಿರುಗೇಟು ನೀಡಿದ್ದಾರೆ. ವಿದೇಶಾಂಗ ಸಚಿವೆಯೊಬ್ಬರು ಜನರ ಉಪಯೋಗಕ್ಕಾಗಿ ಟ್ವಿಟರ್ ಬಳಸಿದರೆ ಜನರು ಕೆಲವು ಅನಗತ್ಯ ಪ್ರಶ್ನೆ ಕೇಳಿ ಕಿರಿ ಕಿರಿ ಮಾಡುವುದಕ್ಕೆ ಸುಷ್ಮಾ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.