Select Your Language

Notifications

webdunia
webdunia
webdunia
webdunia

ಪಾಕ್ ವೇಗಿ ಶೊಯೇಬ್ ಅಖ್ತರ್ ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗುವ ಬಯಕೆಯಂತೆ!

ಪಾಕ್ ವೇಗಿ ಶೊಯೇಬ್ ಅಖ್ತರ್ ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗುವ ಬಯಕೆಯಂತೆ!
ಇಸ್ಲಾಮಾಬಾದ್ , ಮಂಗಳವಾರ, 5 ಮೇ 2020 (11:32 IST)
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಟೀಂ ಇಂಡಿಯಾಗೆ ಬೌಲಿಂಗ್ ಕೋಚ್ ಆಗಬೇಕೆಂಬ ಮಹದಾಸೆಯಿದೆಯಂತೆ.


ಆಗಾಗ ಭಾರತೀಯ ಕ್ರಿಕೆಟ್, ಕ್ರಿಕೆಟಿಗರ ಬಗ್ಗೆ ವಿಮರ್ಶೆ ಮಾಡಿ ಮಾತನಾಡುವ ಶೊಯೇಬ್ ಅಖ್ತರ್ ಈಗ ಇಂತಹದ್ದೊಂದು ಆಸೆ ಹೊಂದಿದ್ದಾರಂತೆ. ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಅಷ್ಟಕಷ್ಟೇ. ಅದರ ನಡುವೆ ಅಖ್ತರ್ ಈ ಆಸೆ ನನಸಾಗುವುದು ಸುಲಭವಲ್ಲ ಬಿಡಿ!

ಹಾಗಿದ್ದರೂ ಒಂದು ವೇಳೆ ತನಗೇನಾದರೂ ಭಾರತೀಯ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗುವ ಅವಕಾಶ ಸಿಕ್ಕರೆ ಪ್ರತಿಭಾವಂತರನ್ನು ಬೇಗನೇ ಗುರುತಿಸಿ ಅವರ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುವುದಾಗಿ ಅಖ್ತರ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಅತ್ತಿದ್ದಕ್ಕೆ ಲೈವ್ ಚ್ಯಾಟ್ ಅರ್ಧಕ್ಕೇ ಬಿಟ್ಟು ನಡೆದರಂತೆ ರೋಹಿತ್ ಶರ್ಮಾ!