Publish Date: Sat, 02 May 2020 (10:32 IST)
Updated Date: Sat, 02 May 2020 (10:33 IST)
ಮುಂಬೈ: ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಬಳಿಕ ನಾಯಕತ್ವದ ಗುಣವಿರುವ ಯುವ ಆಟಗಾರರು ಯಾರಿದ್ದಾರೆ? ಕೊಹ್ಲಿ ಬಳಿಕ ಭಾರತ ತಂಡಕ್ಕೆ ಯಾರು ನಾಯಕರಾಗಬಹುದು? ಈ ಪ್ರಶ್ನೆಗೆ ಮಾಜಿ ವೇಗಿ ಶ್ರೀಶಾಂತ್ ಉತ್ತರಿಸಿದ್ದಾರೆ.
ಶ್ರೀಶಾಂತ್ ಪ್ರಕಾರ ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕತ್ವ ಕೆಎಲ್ ರಾಹುಲ್ ಪಾಲಾಗುವ ಸಾಧ್ಯತೆಯಿದೆಯಂತೆ. ಹಾಗಂತ ಲೈವ್ ಚ್ಯಾಟ್ ವೇಳೆ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಮೂರೂ ಮಾದರಿ ಕ್ರಿಕೆಟ್ ನಲ್ಲಿ ಜವಾಬ್ಧಾರಿಯುತ ಆಟವಾಡುತ್ತಾರೆ. ಅವರು ಕೊಹ್ಲಿಯಂತೇ ಫಿಟ್ನೆಸ್ ಕಡೆಗೆ ಹೆಚ್ಚು ಗಮನಕೊಡುತ್ತಾರೆ. ಹೀಗಾಗಿ ಕೊಹ್ಲಿ ಬಳಿಕ ಅವರೇ ನಾಯಕರಾಗಬಹುದು ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.