Publish Date: Sat, 02 May 2020 (09:10 IST)
Updated Date: Sat, 02 May 2020 (09:12 IST)
ದುಬೈ: ಐಸಿಸಿ ಬಿಡುಗಡೆಗೊಳಿಸಿರುವ ಇತ್ತೀಚೆಗಿನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಒಂದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ದಿಡೀರ್ ಬೆಳವಣಿಗೆ ಅಭಿಮಾನಿಗಳನ್ನು ಅಚ್ಚರಿಯಲ್ಲಿ ಕೆಡವಿದೆ.
ಭಾರತಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಸಾಧನೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗಿದ್ದರೂ ಇದೀಗ ಯಾವುದೇ ಕ್ರಿಕೆಟ್ ಸರಣಿ ನಡೆಯದೇ ಇದ್ದರೂ ಆಸ್ಟ್ರೇಲಿಯಾ ನಂ.1 ಸ್ಥಾನಕ್ಕೇರಿರುವುದರ ಬಗ್ಗೆ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದೀಗ ಟೆಸ್ಟ್ ನಲ್ಲಿ ಭಾರತವನ್ನು ಹಿಂದಿಕ್ಕಿ, ಟಿ20 ಕ್ರಿಕೆಟ್ ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ನಂ.1 ತಂಡವಾಗಿ ಹೊರಹೊಮ್ಮಿದೆ.