Select Your Language

Notifications

webdunia
webdunia
webdunia
webdunia

ಚೆಂಡು ಹೊಳಪು ಮೂಡಿಸಲು ರಾಸಾಯನಿಕ ಬಳಕೆಗೆ ಅಪಸ್ವರವೆತ್ತಿದ ಆಶಿಶ್ ನೆಹ್ರಾ

ಚೆಂಡು ಹೊಳಪು ಮೂಡಿಸಲು ರಾಸಾಯನಿಕ ಬಳಕೆಗೆ ಅಪಸ್ವರವೆತ್ತಿದ ಆಶಿಶ್ ನೆಹ್ರಾ
ಮುಂಬೈ , ಭಾನುವಾರ, 26 ಏಪ್ರಿಲ್ 2020 (09:23 IST)
ಮುಂಬೈ: ಕೊರೋನಾ ಹಿನ್ನಲೆಯಲ್ಲಿ ಆಟಗಾರರು ಇನ್ನು ಮುಂದೆ ಚೆಂಡು ಹೊಳಪು ಮೂಡಿಸಲು ಜೊಲ್ಲು ರಸ ಬಳಕೆ ತಡೆಯಲು ಯಾವುದಾದರೂ ರಾಸಾಯನಿಕವನ್ನೇ ಬಳಸುವುದನ್ನು ಕಾನೂನುಬದ್ಧಗೊಳಿಸಲು ಯೋಜನೆ ರೂಪಿಸಿರುವ ಐಸಿಸಿ ಕ್ರಮಕ್ಕೆ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ವಿರೋಧ ವ್ಯಕ್ತಪಡಿಸಿದ್ದಾರೆ.


ಚೆಂಡು ರಿವರ್ಸ್ ಸ್ವಿಂಗ್ ಪಡೆಯಬೇಕಾದರೆ ಒಂದು ಬದಿಗೆ ಜೊಲ್ಲು ಅಥವಾ ಬೆವರಿನಿಂದ ಒರೆಸುವುದು ಅನಿವಾರ್ಯ. ವ್ಯಾಸಲಿನ್ ಕೂಡಾ ಪರ್ಯಾಯವಾಗಿ ಕೆಲಸ ಮಾಡದು.

ವ್ಯಾಸಲಿನ್ ಬಳಕೆ ಮಾಡುವುದರಿಂದ ಚೆಂಡು ಹೊಳಪು ಮೂಡಬಹುದಷ್ಟೇ ಹೊರತು ಸ್ವಿಂಗ್ ಆಗದು. ಇದನ್ನು ಬೇಕಾದರೆ ನೀವು ಪರೀಕ್ಷಿಸಿ ನೋಡಿ ಎಂದು ನೆಹ್ರಾ ಸವಾಲು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈಗಲೂ ಕೆಎಲ್ ರಾಹುಲ್ ಗೆ ದುಸ್ವಪ್ನವಾಗಿ ಕಾಡುವ ಆ ಪಂದ್ಯ ಯಾವುದು ಗೊತ್ತಾ?