Select Your Language

Notifications

webdunia
webdunia
webdunia
webdunia

ಕೊರೋನಾ ಇಫೆಕ್ಟ್: ಬಾಲ್ ಗೆ ಜೊಲ್ಲು ಬಳಸುವ ಬದಲು ಹೊಸ ನಿಯಮ ರೂಪಿಸಲಿರುವ ಐಸಿಸಿ

ಕೊರೋನಾ ಇಫೆಕ್ಟ್: ಬಾಲ್ ಗೆ ಜೊಲ್ಲು ಬಳಸುವ ಬದಲು ಹೊಸ ನಿಯಮ ರೂಪಿಸಲಿರುವ ಐಸಿಸಿ
ದುಬೈ , ಶನಿವಾರ, 25 ಏಪ್ರಿಲ್ 2020 (10:15 IST)
ದುಬೈ: ಕ್ರಿಕೆಟ್ ನಲ್ಲಿ ಪಂದ್ಯದ ನಡುವೆ ಬಾಲ್ ಶೈನಿಂಗ್ ಬರಲಿ ಎಂದು ಆಟಗಾರರು ಜೊಲ್ಲು ಅಥವಾ ಬೆವರು ಬಳಸಿ ಒರೆಸುವುದನ್ನು ಕಾಣುತ್ತೀರಿ. ಆದರೆ ಇನ್ನು ಮುಂದೆ ಇದಕ್ಕೆ ಬ್ರೇಕ್ ಬೀಳಲಿದೆ. ಎಲ್ಲವೂ ಕೊರೋನಾ ಮಾಯೆ!


ಕೊರೋನಾ ಜೊಲ್ಲು ಮತ್ತು ಬೆವರಿನಿಂದ ಹರಡುತ್ತದೆ. ಹೀಗಾಗಿ ಇನ್ನು ಮುಂದೆ ಪಂದ್ಯದ ಸಮಯದಲ್ಲಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ಮತ್ತು ಬೆವರು ಬಳಸುವುದನ್ನು ನಿಷೇಧಿಸಲು ಐಸಿಸಿ ತೀರ್ಮಾನಿಸಿದೆ.

ಇದರ ಬದಲು ಯಾವುದಾದರೂ ಕೃತಕ ನಿರ್ದಿಷ್ಟ ರಾಸಾಯನಿಕವನ್ನು ಚೆಂಡು ಹೊಳಪು ಮೂಡಿಸಲು ಬಳಸಲು ಚಿಂತನೆ ನಡೆಸಿದೆ. ಅಂಪಾಯರ್ ಗಳ ಮಧ್ಯಸ್ಥಿಕೆಯಲ್ಲಿ ಅಗತ್ಯ ಬಂದಾಗ ರಾಸಾಯನಿಕ ಬಳಸಿ ಚೆಂಡು ಶೈನಿಂಗ್ ಮಾಡಬಹುದು ಎಂಬ ನಿಯಮ ತರಲು ಐಸಿಸಿ ಹೊರಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದ ಸಂಕಷ್ಟಕ್ಕೀಡಾದವರ ಹಸಿವು ತಣಿಸಲಿರುವ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್