Publish Date: Sat, 25 Apr 2020 (09:21 IST)
Updated Date: Sat, 25 Apr 2020 (09:23 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದರು. ಕೊರೋನಾ ಕಾರಣದಿಂದ ಸಂಭ್ರಮಾಚರಣೆ ಮಾಡದಿದ್ದರೂ ತಪ್ಪದೇ ತಮ್ಮ ತಾಯಿಯ ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಸಚಿನ್ ಗೆ ತಾಯಿ ಅತ್ಯಮೂಲ್ಯ ಉಡುಗೊರೆಯೊಂದನ್ನು ನೀಡಿದ್ದಾರೆ. ಇದನ್ನು ಸಚಿನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಖುಷಿ ಪಟ್ಟಿದ್ದಾರೆ.
ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಚಿನ್ ಗೆ ಗಣಪತಿಯ ಪುಟ್ಟ ವಿಗ್ರಹವೊಂದನ್ನು ಉಡುಗೊರೆ ನೀಡಿದ್ದಾರೆ ತಾಯಿ ರಜನಿ ತೆಂಡುಲ್ಕರ್. ಗಣಪತಿಯ ಪರಮ ಭಕ್ತರಾಗಿರುವ ಸಚಿನ್ ಗೆ ಇದು ಅಮೂಲ್ಯ ಉಡುಗೊರೆಯಾಗಿದೆ.