Publish Date: Sat, 25 Apr 2020 (09:18 IST)
Updated Date: Sat, 25 Apr 2020 (09:20 IST)
ದುಬೈ: ಕೊರೋನಾವೈರಸ್ ನಿಂದಾಗಿ ಈ ಬಾರಿ ಐಸಿಸಿ ಟಿ20 ವಿಶ್ವಕಪ್ ನಡೆಯುತ್ತದೋ ಇಲ್ಲವೋ ಎಂಬ ಅನುಮಾನಗಳ ನಡುವೆಯೇ ಐಸಿಸಿ ತೆರೆಮರೆಯಲ್ಲೇ ತಯಾರಿ ನಡೆಸುತ್ತಿದೆ.
ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಬೇಕಿದೆ. ಕೊರೋನಾ ಪರಿಸ್ಥಿತಿ ಹೀಗೇ ಮುಂದುವರಿದರೆ ಕ್ರಿಕೆಟ್ ಕೂಟ ಆಯೋಜನೆ ಕಷ್ಟ.
ಇದರ ನಡುವೆಯೇ ಅಕ್ಟೋಬರ್ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಜತೆಗೆ ಐಸಿಸಿ ವಿಶ್ವಕಪ್ ಗೆ ತಯಾರಿ ನಡೆಸುತ್ತಿದೆ. ಆರು ತಿಂಗಳಿಗೆ ಆಸ್ಟ್ರೇಲಿಯಾ ವಿದೇಶೀಯರಿಗೆ ನಿರ್ಬಂಧ ವಿಧಿಸಿರುವುದೂ ಅಲ್ಲಿ ಟೂರ್ನಿ ನಡೆಸಲು ಕಷ್ಟವಾಗಿದೆ. ಹಾಗಿದ್ದರೂ ಪರಿಸ್ಥಿತಿ ಸುಧಾರಿಸಿದರೆ ಕ್ರೀಡಾ ಕೂಟ ನಡೆಸಲು ಅನುಮತಿ ಸಿಗಬಹುದು. ಹೀಗಾಗಿ ತೆರೆಮರೆಯಲ್ಲೇ ಐಸಿಸಿ ತಯಾರಿ ನಡೆಸಿದೆ.