Select Your Language

Notifications

webdunia
webdunia
webdunia
webdunia

ಗಟ್ಟಿಮೇಳ ಧಾರವಾಹಿ ನಾಯಕಿ ನಿಶಾ ಹೆಸರು ಬಳಸಿ ವಂಚನೆ

ಗಟ್ಟಿಮೇಳ ಧಾರವಾಹಿ ನಾಯಕಿ ನಿಶಾ ಹೆಸರು ಬಳಸಿ ವಂಚನೆ
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2020 (09:40 IST)
ಬೆಂಗಳೂರು: ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡಲು ಹಲವರು ಮುಂದೆ ಬರುತ್ತಿದ್ದಾರೆ. ಅದರ ನಡುವೆಯೇ ಕೆಲವರು ಇದೇ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ನಾಯಕಿ ಪಾತ್ರಧಾರಿ ಅಮೂಲ್ಯ ಅಲಿಯಾಸ್ ನಿಶಾ ಮಿಲನ ತಮ್ಮ ಹೆಸರಿನಲ್ಲಿ ಕೆಲವರು ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದ್ದಾರೆ. ನಾನು ಯಾರಿಗೂ ಹಣ ಸಂಗ್ರಹಿಸಲು ಸೂಚನೆ ಕೊಟ್ಟಿಲ್ಲ. ನನ್ನ ಹೆಸರು ದುರ್ಬಳಕೆ ಮಾಡಲಾಗುತ್ತಿದೆ.

ಯಾವುದೇ ಕಲಾವಿದರೂ ಈ ರೀತಿ ಹಣ ಸಂಗ್ರಹಿಸಲು ಉತ್ತೇಜನ ನೀಡಿಲ್ಲ. ಯಾರೋ ಬೇಕೆಂದೇ ವಂಚಿಸುತ್ತಿದ್ದಾರೆ. ಇಂತಹವರ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಇಂತಹವರು ಕಣ್ಣಿಗೆ ಬಿದ್ದರೆ ತಕ್ಷಣವೇ ಪೊಲೀಸರಿಗೆ ದೂರು ನೀಡಿ ಎಂದು ನಿಶಾ ತಮ್ಮ ಸಾಮಾಜಿಕ ಜಾಲತಾಣ ಪುಟದ ಮೂಲಕ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ರೈ ಜತೆ ನಟಿಸಲು ನಾಚಿಕೆ ಪಟ್ಟಿದ್ದರಂತೆ ಶಾರುಖ್ ಖಾನ್