Publish Date: Sat, 25 Apr 2020 (09:45 IST)
Updated Date: Sat, 25 Apr 2020 (09:47 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಐಪಿಎಲ್ ಕ್ರೀಡಾ ಕೂಟ ಅನಿಶ್ಚಿತತೆಯಲ್ಲಿದ್ದು, ಅನಿರ್ದಾಷ್ಟವಧಿಗೆ ಮುಂದೂಡಿಕೆಯಾಗಿದೆ.
ಐಪಿಎಲ್ ನಡೆಯುತ್ತದೆಯೇ, ಯಾವಾಗ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಸ್ವತಃ ಬಿಸಿಸಿಐ ಇಲ್ಲ. ಹೀಗಿರುವಾಗ ತಮ್ಮ ಆರ್ ಸಿಬಿ ಟೀಮ್ ಮೇಟ್ ಎಬಿಡಿ ವಿಲಿಯರ್ಸ್ ಜತೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಐಪಿಎಲ್ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಈ ವರ್ಷದ ಐಪಿಎಲ್ ಆವೃತ್ತಿ ನಡೆಯುತ್ತದೆ ಎಂಬ ಭರವಸೆಯಲ್ಲಿರುವುದಾಗಿ ಕೊಹ್ಲಿ ಹೇಳಿದ್ದಾರೆ. ಯಾವಾಗ ನಡೆಯಬಹುದು ಎಂಬುದು ನನಗೆ ಗೊತ್ತಿಲ್ಲ. ಆದರೆ ಐಪಿಎಲ್ ನಡೆಯಬಹುದು ಎಂಬ ವಿಶ್ವಾಸದಲ್ಲಿರುವುದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ.