ಮುಂಬೈ: ಟೀಂ ಇಂಡಿಯಾದ ಎಷ್ಟೋ ಯುವ ಕ್ರಿಕೆಟಿಗರಿಗೆ ಪಾಠ ಹೇಳಿಕೊಟ್ಟ ಗುರು ರಾಹುಲ್ ದ್ರಾವಿಡ್. ಅವರಲ್ಲಿ ಯುವ ಆಟಗಾರ ವಿಜಯ್ ಶಂಕರ್ ಕೂಡಾ ಒಬ್ಬರು.
									
										
								
																	
ಭಾರತ ಎ ತಂಡದಲ್ಲಿ ಕೋಚ್ ಆಗಿದ್ದಾಗ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ವಿಜಯ್ ಶಂಕರ್ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆಯೂ ಅವರನ್ನು ಸ್ಮರಿಸಿಕೊಂಡಿದ್ದಾರೆ.
									
			
			 
 			
 
 			
			                     
							
							
			        							
								
																	‘ನನಗೆ ಯಾವತ್ತೂ ರಾಹುಲ್ ದ್ರಾವಿಡ್ ಅವರೇ ಸ್ಪೂರ್ತಿ. ಚಿಕ್ಕಂದಿನಿಂದಲೂ ಅವರ ಬ್ಯಾಟಿಂಗ್ ನೋಡಿಕೊಂಡೇ ಸ್ಪೂರ್ತಿ ಪಡೆದೆ. ಅದರಲ್ಲೂ 2003 ರಲ್ಲಿ ಅಡಿಲೇಡ್ ಟೆಸ್ಟ್ ನಲ್ಲಿ ಅವರ ಆಟ ನೋಡಿದ ಮೇಲಂತೂ ಅಪ್ಪಟ ಅಭಿಮಾನಿಯಾಗಿಬಿಟ್ಟೆ’ ಎಂದು ಗುರುಗಳ ಗುಣಗಾನ ಮಾಡಿದ್ದಾರೆ.