ಭಾರತವನ್ನು ಭಾರತದಲ್ಲೇ ಸೋಲಿಸುವೆವು: ಆಸ್ಟ್ರೇಲಿಯಾ ಕೋಚ್

ಶನಿವಾರ, 2 ಮೇ 2020 (10:10 IST)
ಸಿಡ್ನಿ: ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತವನ್ನು ನಂ.1 ಸ್ಥಾನದಿಂದ ಕೆಳಗಿಳಿಸಿ ತಾವೇ ನಂ.1 ಆಗುತ್ತಿದ್ದಂತೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಟೀಂ ಇಂಡಿಯಾಕ್ಕೆ ಸವಾಲು ಹಾಕಿದ್ದಾರೆ.


ಮುಂದಿನ ಬಾರಿ ಭಾರತವನ್ನು ಭಾರತದಲ್ಲೇ ಸೋಲಿಸುವೆವು ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಸವಾಲು ಹಾಕಿದ್ದಾರೆ. ಟೆಸ್ಟ್ ನಲ್ಲಿ ನಂ.1 ಆಗುತ್ತಿದ್ದಂತೇ ಆಸ್ಟ್ರೇಲಿಯಾ ಕೋಚ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.

ಸದ್ಯಕ್ಕೆ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ನಮ್ಮ ಗುರಿ. ಇದರ ಜತೆಗೆ ಭಾರತವನ್ನು ಭಾರತದಲ್ಲೇ ಮಣ್ಣು ಮುಕ್ಕಿಸುವುದೂ ನಮ್ಮ ಪ್ರಮುಖ ಗುರಿಯಾಗಲಿದೆ ಎಂದಿದ್ದಾರೆ ಲ್ಯಾಂಗರ್.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜತೆಯಾಟವಾಡಲು ಕಾಯುತ್ತಿದ್ದೇನೆ! ಕೊಹ್ಲಿಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ