Publish Date: Tue, 05 May 2020 (10:22 IST)
Updated Date: Tue, 05 May 2020 (10:24 IST)
ಮುಂಬೈ: ಲಾಕ್ ಡೌನ್ ವೇಳೆ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಆಗಾಗ ಟೀಂ ಇಂಡಿಯಾದ ಸಹ ಕ್ರಿಕೆಟಿಗರೊಂದಿಗೆ ಲೈವ್ ಚ್ಯಾಟ್ ನಡೆಸುತ್ತಿರುತ್ತಾರೆ.
ಮೊನ್ನೆ ಮೊಹಮ್ಮದ್ ಶಮಿ ಜತೆಗೆ ಲೈವ್ ಚ್ಯಾಟ್ ನಡೆಸುವ ವೇಳೆ ರೋಹಿತ್ ತಮ್ಮ ಪಾಲಿನ ಮಾತುಕತೆ ಮುಗಿಸಿ ಸೈನ್ ಔಟ್ ಆಗಿ ತೆರಳಿದ್ದರು. ಇದಕ್ಕೆ ಸಹ ಕ್ರಿಕೆಟಿಗ ಯಜುವೇಂದ್ರ ಚಾಹಲ್ ತಮಾಷೆ ಮಾಡಿದ್ದಾರೆ.
ರೋಹಿತ್ ಅರ್ಧದಿಂದಲೇ ಲೈವ್ ಚ್ಯಾಟ್ ಮುಗಿಸಿ ತೆರಳಲು ಕಾರಣವೇನೆಂದು ಚಾಹಲ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ‘ಸಮೈರಾ ಅಳುತ್ತಿದ್ದಾಳೆ. ಅದಕ್ಕೆ ರೋಹಿತ್ ಭಯ್ಯಾ ಹೋಗಿಯೇ ಬಿಟ್ಟರು’ ಎಂದು ಚಾಹಲ್ ಟ್ರೋಲ್ ಮಾಡಿದ್ದಾರೆ.