Select Your Language

Notifications

webdunia
webdunia
webdunia
webdunia

ನಾವು ನಿಮ್ಮಷ್ಟು ಲಕ್ಕಿ ಅಲ್ಲ ಬಿಡಿ ಎಂದು ಬ್ರೆಟ್ ಲೀ ಬಳಿ ಬೇಸರ ತೋಡಿಕೊಂಡ ರೋಹಿತ್ ಶರ್ಮಾ

ನಾವು ನಿಮ್ಮಷ್ಟು ಲಕ್ಕಿ ಅಲ್ಲ ಬಿಡಿ ಎಂದು ಬ್ರೆಟ್ ಲೀ ಬಳಿ ಬೇಸರ ತೋಡಿಕೊಂಡ ರೋಹಿತ್ ಶರ್ಮಾ
ಮುಂಬೈ , ಭಾನುವಾರ, 3 ಮೇ 2020 (08:59 IST)
ಮುಂಬೈ: ನಾವು ನಿಮ್ಮಷ್ಟು ಲಕ್ಕಿ ಅಲ್ಲ ಬಿಡಿ. ನಿಮಗೆ ಇರುವ ಹಾಗೆ ಮನೆಯ ಕಂಪೌಂಡ್ ಒಳಗೇ ಕ್ರಿಕೆಟ್ ಆಡಲು ನಮಗೆ ಅನುಕೂಲವಿಲ್ಲ.. ಹೀಗಂತ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.


ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಹೋಗಿ ಕ್ರಿಕೆಟ್ ಆಡಲು ಆಗುತ್ತಿಲ್ಲ. ಮನೆಯೊಳಗೇ ಅಥವಾ ಮನೆಯ ಕಂಪೌಂಡ್ ಒಳಗೇ ಆಡಲು ಮುಂಬೈನಂತಹ ಪ್ರದೇಶದಲ್ಲಿ ಅಷ್ಟೊಂದು ಸ್ಥಳಾವಕಾಶವಿಲ್ಲ. ಅಷ್ಟೊಂದು ಸ್ಥಳಾವಕಾಶವಿರುವ ಮನೆ ಖರೀದಿಸಬೇಕೆಂದರೆ ತುಂಬಾ ದುಬಾರಿ ಹೀಗಂತ ರೋಹಿತ್ ಬ್ರೆಟ್ ಲೀ ಬಳಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಾನು ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ನನಗೆ ಬಾಲ್ಕನಿಯಲ್ಲಿ ಸ್ವಲ್ಪವೇ ಸ್ಥಳವಿದೆ. ಅಲ್ಲಿ ನನ್ನಿಂದಾದಷ್ಟು ಕ್ರಿಕೆಟ್ ಆಡುತ್ತೇನೆ. ಅದು ಬಿಟ್ಟರೆ ಕ್ರಿಕೆಟ್ ಆಡಲು ಸ್ಥಳವಿಲ್ಲದೇ ಬೇಸರವಾಗಿದೆ ಎಂದು ರೋಹಿತ್ ಅಳಲು ತೋಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏನಣ್ಣಾ..? ಹೇರ್ ಕಟ್ಟಿಂಗ್ ಮಾಡಿಸಿಲ್ವಾ? ಯುವರಾಜ್ ಸಿಂಗ್ ಗೆ ಕಿಚಾಯಿಸಿದ ರೋಹಿತ್ ಶರ್ಮಾ