Publish Date: Sat, 02 May 2020 (11:07 IST)
Updated Date: Sat, 02 May 2020 (11:08 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಪುರುಷರಿಗೆ ದೊಡ್ಡ ಸಮಸ್ಯೆಯಾಗಿರುವುದು ಹೇರ್ ಕಟ್ಟಿಂಗ್. ಇದು ಜನಸಾಮಾನ್ಯರನ್ನು ಮಾತ್ರವಲ್ಲ, ಸೆಲೆಬ್ರಿಟಿಗಳ ಮೇಲೂ ಪರಿಣಾಮ ಬೀರಿದೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲೇ ಹೇರ್ ಕಟ್ಟಿಂಗ್ ಮಾಡಿ ಸುದ್ದಿಯಾಗಿದ್ದರು. ಇದೀಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಜತೆಗಾರ ಯುವರಾಜ್ ಸಿಂಗ್ ತಲೆಕೂದಲು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಕೆದರಿದ ಕೂದಲು ನೋಡಿದ ರೋಹಿತ್ ಶರ್ಮಾ ‘ಏನಣ್ಣಾ.. ಲಾಕ್ ಡೌನ್ ನಿಮ್ಮ ಕೂದಲಿನ ಮೇಲೂ ಭಾರೀ ಪರಿಣಾಮ ಬೀರಿದಂತಿದೆ’ ಎಂದು ಕಿಚಾಯಿಸಿದ್ದಾರೆ. ಸೆಲೆಬ್ರಿಟಿಗಳದ್ದೇ ಈ ಪರಿಯಾದರೆ, ಜನ ಸಾಮಾನ್ಯರ ಪಾಡೇನು?