Publish Date: Sat, 02 May 2020 (09:46 IST)
Updated Date: Sat, 02 May 2020 (09:47 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಣ ಸಂಪಾದನೆ ಮಾಡುತ್ತಿದ್ದಂತೇ ಕಠಿಣ ಪರಿಶ್ರಮ ಮರೆತು ಸೋಮಾರಿಯಾದರು ಎಂದು ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ.
ಪಾಂಡ್ಯರನ್ನು ಖ್ಯಾತ ಆಲ್ ರೌಂಡರ್ ಗಳಾದ ಕಪಿಲ್ ದೇವ್, ಇಮ್ರಾನ್ ಖಾನ್ ಗೆ ಹೋಲಿಸಲಾಗುತ್ತದೆ. ಆದರೆ ಹಾರ್ದಿಕ್ ಇವರ ಪಕ್ಕ ಸುಳಿಯಲೂ ಲಾಯಕ್ಕಾದ ಕ್ರಿಕೆಟಿಗನಲ್ಲ ಎಂದು ರಜಾಕ್ ಹೇಳಿದ್ದಾರೆ.
ಹಾರ್ದಿಕ್ ಕಠಿಣ ಪರಿಶ್ರಮಪಡುವುದನ್ನು ಮರೆತಿದ್ದಾರೆ. ಎಲ್ಲಾ ಆಟಗಾರರೂ ಹೀಗೆ. ಕಠಿಣ ಪರಿಶ್ರಮ ಪಡದೇ ಆರಾಮವಾಗಿದ್ದರೆ ಯಾರಿಗೂ ಯಶಸ್ಸು ಸಿಗದು ಎಂದು ರಜಾಕ್ ಹೇಳಿದ್ದಾರೆ.