Publish Date: Mon, 04 May 2020 (09:49 IST)
Updated Date: Mon, 04 May 2020 (09:52 IST)
ಮುಂಬೈ: ಲಾಕ್ ಡೌನ್ ನಿಂದಾಗಿ ತಾರೆಯರು ಇನ್ ಸ್ಟಾಗ್ರಾಂ ಲೈವ್ ಮೂಲಕ ಸಂದರ್ಶನ ನೀಡುತ್ತಿದ್ದಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ವಿಚಿತ್ರ ಆಸೆಯೊಂದನ್ನು ಮುಂದಿಟ್ಟಿದ್ದಾರೆ.
ಇನ್ ಸ್ಟಾ ಲೈವ್ ಚ್ಯಾಟ್ ನಲ್ಲಿ ಚಾಹಲ್ ಬಳಿ ಸಂದರ್ಶನಕರು ನಿಮಗೆ ಒಂದು ವೇಳೆ ಯಾರ ಕಣ್ಣಿಗೂ ಬೀಳದೇ ಯಾರನ್ನಾದರೂ ಭೇಟಿಯಾಗುವ ಪವರ್ ಕೊಟ್ಟರೆ ಯಾರನ್ನು ಭೇಟಿಯಾಗುವಿರಿ ಎಂಬ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಉತ್ತರಿಸಿರುವ ಚಾಹಲ್ ‘ನನಗೆ ಅಂತಹ ಪವರ್ ಇದ್ದರೆ ಯಾರ ಕಣ್ಣಿಗೂ ಕಾಣದಂತೇ ರಾಂಚಿಗೆ ಹೋಗಿ ಧೋನಿಯನ್ನು ಭೇಟಿ ಮಾಡಿ ಬರುವೆ’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಧೋನಿಯನ್ನು ಕ್ರಿಕೆಟ್ ಮೈದಾನದಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಚಾಹಲ್ ಹೇಳಿಕೊಂಡಿದ್ದಾರೆ.