Publish Date: Mon, 04 May 2020 (09:20 IST)
Updated Date: Mon, 04 May 2020 (09:21 IST)
ಮುಂಬೈ: ಪ್ರಸಕ್ತ ವಿಶ್ವವನ್ನೇ ಸ್ತಬ್ಧಗೊಳಿಸಿರುವ ಕೊರೋನಾವೈರಸ್ ನ್ನು ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಟೆಸ್ಟ್ ಕ್ರಿಕೆಟ್ ಗೆ ಹೋಲಿಸಿದ್ದಾರೆ.
ಇದು ಡೇಂಜರಸ್ ವಿಕೆಟ್ ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದಂತೆ. ಬಾಲ್ ಸೀಮ್ ಆಗುತ್ತಿದೆ, ಸ್ಪಿನ್ ಕೂಡಾ ಆಗುತ್ತಿದೆ. ಬ್ಯಾಟ್ಸ್ ಮನ್ ಗಳಿಗೆ ಹೇಗೆ ಎದುರಿಸಬೇಕೆಂದೇ ಗೊಂದಲವಾಗುತ್ತಿದೆ ಎಂದು ಗಂಗೂಲಿ ಬಣ್ಣಿಸಿದ್ದಾರೆ.
ಹೀಗಾಗಿ ಬ್ಯಾಟ್ಸ್ ಮನ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕು. ಸಣ್ಣ ತಪ್ಪೂ ಆಗದಂತೆ ಎಚ್ಚರಿಕೆ ವಹಿಸಬೇಕು. ಇದು ಕಷ್ಟ, ಆದರೆ ಜತೆಯಾಗಿದ್ದರೆ ನಾವು ಈ ಪಂದ್ಯ ಗೆಲ್ಲಬಹುದು’ ಎಂದು ಕ್ರಿಕೆಟ್ ಶೈಲಿಯಲ್ಲಿ ಕೊರೋನಾವನ್ನು ವಿವರಿಸಿದ್ದಾರೆ.