ಅಭ್ಯಾಸ ಶುರು ಮಾಡಿಕೊಂಡ ಶಿಖರ್ ಧವನ್

ಶನಿವಾರ, 1 ಆಗಸ್ಟ್ 2020 (12:43 IST)
ನವದೆಹಲಿ: ಐಪಿಎಲ್ ಅನೌನ್ಸ್ ಆಗುತ್ತಿದ್ದಂತೇ ಕ್ರಿಕೆಟ್ ಆಟಗಾರರು ಸದ್ದಿಲ್ಲದೇ ತಯಾರಿ ಆರಂಭಿಸಿದ್ದಾರೆ. ಕೊರೋನಾ ಬಳಿಕ ಕ್ರಿಕೆಟ್ ಮರಳಲು ಸಜ್ಜಾಗುತ್ತಿರುವ ಕ್ರಿಕೆಟಿಗರು ಮತ್ತೆ ಹೊರಾಂಗಣ ಅಭ್ಯಾಸಕ್ಕೆ ಸಜ್ಜಾಗಿದ್ದಾರೆ.


ಟೀಂ ಇಂಡಿಯಾ ಆರಂಭಿಕ, ದೆಹಲಿ ಐಪಿಎಲ್ ತಂಡದ ಆಟಗಾರ ಶಿಖರ್ ಧವನ್ ಹೊರಾಂಗಣ ಅಭ್ಯಾಸ ಶುರು ಮಾಡಿದ್ದಾರೆ. ದೆಹಲಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿಕೊಂಡಿರುವ ವಿಡಿಯೋವನ್ನು ಪ್ರಕಟಿಸಿರುವ ಧವನ್ ‘ಬ್ಯಾಟ್ ಮತ್ತು ಬಾಲ್ ನ ಸೌಂಡ್ ಕೇಳುವುದೇ ಮಜಾ’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ರೋಹಿತ್ ಕೂಡಾ ಅಭ್ಯಾಸ ಆರಂಭಿಸಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಧವನ್ ಸರದಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್