ಐಪಿಎಲ್ ಗೂ ಮೊದಲೇ ನಡೆಯಲಿದೆ ಟೀಂ ಇಂಡಿಯಾ ಆಟಗಾರರಿಗೆ ಡ್ರಿಲ್

ಶನಿವಾರ, 1 ಆಗಸ್ಟ್ 2020 (09:41 IST)
ಮುಂಬೈ: ಐಪಿಎಲ್ ಗೆ ಎಲ್ಲಾ ಕ್ರಿಕೆಟಿಗರು ತಯಾರಿ ನಡೆಸುತ್ತಿದ್ದರೆ ಅದಕ್ಕೂ ಮೊದಲೇ ಟೀಂ ಇಂಡಿಯಾ ಆಟಗಾರರಿಗೆ ಬಾಂಡಿಂಗ್ ಸೆಷನ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.


ಕೊರೋನಾದಿಂದಾಗಿ ಹಲವು ದಿನಗಳಿಂದ ಪರಸ್ಪರ ಮುಖವನ್ನೂ ನೋಡದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೆಲವು ದಿನಗಳ ಕಾಲ ತರಬೇತಿ ಕ್ಯಾಂಪ್ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿತ್ತು.

ಅದು ಐಪಿಎಲ್ ಗೂ ಮೊದಲೇ ನಡೆಯಲಿದೆ. ಯಾಕೆಂದರೆ ಐಪಿಎಲ್ ಮುಗಿದ ತಕ್ಷಣವೇ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಸರಣಿ ಆಡಲು ತೆರಳಲಿದೆ. ಹೀಗಾಗಿ ಅದಕ್ಕೂ ಮೊದಲು ಆಟಗಾರರು ಕೆಲವು ದಿನ ಜತೆಯಾಗಿ ಕಳೆಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಮೆಂಟರಿ ಹೇಳಲು ಮತ್ತೆ ಅವಕಾಶ ಕೊಡಿ: ಬಿಸಿಸಿಐ ಮುಂದೆ ಬೇಡಿಕೊಂಡ ಸಂಜಯ್ ಮಂಜ್ರೇಕರ್