Publish Date: Fri, 31 Jul 2020 (13:14 IST)
Updated Date: Fri, 31 Jul 2020 (13:15 IST)
ಮುಂಬೈ: ಕೊರೋನಾ ಭಯದಲ್ಲೂ ಐಪಿಎಲ್ ಆಯೋಜಿಸಲು ಹೊರಟಿರುವ ಬಿಸಿಸಿಐ ಈಗ ಯಾವುದೇ ರೀತಿಯಲ್ಲೂ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ.
ಯುಎಇನಲ್ಲಿ ನಡೆಯಲಿರುವ ಐಪಿಎಲ್ ಗೆ ಕಡಿಮೆ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ಬಳಸಿ ಆಟಗಾರರನ್ನು ಮಾತ್ರ ಯಥಾವತ್ತಾಗಿ ಬಳಸಲು ಬಿಸಿಸಿಐ ಚಿಂತನೆ ನಡೆಸಿದೆ.
ಅನಗತ್ಯ ಎನಿಸುವ ಅಧಿಕಾರಿಗಳನ್ನು ಕಿತ್ತು ಹಾಕಿ, ಆಟಗಾರರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ರೂಪಿಸಲಿದೆ. ಒಂದು ತಂಡದಲ್ಲಿ 20-25 ಆಟಗಾರರು ಅವರಿಗೆ 10 ರಿಂದ 15 ಮಂದಿ ಅಧಿಕಾರಿಗಳನ್ನಷ್ಟೇ ನಿಯೋಜಿಸುವ ಸಾಧ‍್ಯತೆಯಿದೆ.