Publish Date: Thu, 30 Jul 2020 (13:38 IST)
Updated Date: Thu, 30 Jul 2020 (13:40 IST)
ನವದೆಹಲಿ: ಪ್ರತೀ ವರ್ಷದಂತೇ ಇರಲ್ಲ ಈ ವರ್ಷದ ಸ್ವಾತಂತ್ರ್ಯೋತ್ಸವ. ಅದಕ್ಕೆ ಕಾರಣ ಕೊರೋನಾ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ಕಾರ್ಯಕ್ರಮ ವಿಶೇಷವಾಗಿಯೇ ನಡೆಯಲಿದೆ.
ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಆದರೆ ಈ ಬಾರಿಯ ಧ್ವಜಾರೋಹಣ ಕಾರ್ಯಕ್ರಮದ ತಯಾರಿ ನಡೆಸುವ ಅಧಿಕಾರಿಗಳಿಗೆ ಆಗಸ್ಟ್ 15 ರವರೆಗೆ ಕ್ವಾರಂಟೈನ್ ಮಾಡಲಾಗುತ್ತದೆ. ಬಳಿಕ ಅವರು ಆರೋಗ್ಯವಾಗಿದ್ದಾರೆ ಎಂದು ಖಚಿತವಾದ ಬಳಿಕವಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ಮೋದಿ ಸೇರಿದಂತೆ ವಿವಿಐಪಿಗಳ ದಂಡೇ ಆಗಮಿಸುತ್ತದೆ. ಹೀಗಾಗಿ ಎಕ್ಸ್ ಟ್ರಾ ಕೇರ್ ತೆಗೆದುಕೊಳ್ಳಲಾಗುತ್ತಿದೆ. ಸೇನಾ ಅಧಿಕಾರಿಗಳು, ಟ್ರಕ್ ಗಳ ಚಾಲಕರು, ಅಧಿಕಾರಿಗಳು ಎಲ್ಲರನ್ನೂ ಕ್ವಾರಂಟೈನ್ ಗೊಳಪಡಿಸಲಾಗಿದೆ.