ಮುಂಬೈ: ದೇಶದಲ್ಲಿ ಎಲ್ಲೆಡೆ ಕೊರೋನಾ ಸದ್ದು ಮಾಡುತ್ತಿದ್ದರೆ ಅಸ್ಸಾಂ, ಬಿಹಾರ ರಾಜ್ಯಗಳಲ್ಲಿ ಕೊರೋನಾ ಜತೆಗೆ ಪ್ರವಾಹದಿಂದಾಗಿ ಜನ, ವನ್ಯ ಜೀವಿಗಳು ಸಂಕಷ್ಟದಲ್ಲಿವೆ.
ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಈ ಪ್ರವಾಹ ಪೀಡಿತರಿಗೆ ನೆರವಾಗಲು ಮುಂದೆ ಬಂದಿದ್ದಾರೆ.
ನಾನು ಮತ್ತು ಅನುಷ್ಕಾ ಕೆಲವು ಪ್ರವಾಹ ಪೀಡಿತರ ಸಂರಕ್ಷಿಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿ ಅಲ್ಲಿನ ಜನರಿಗೆ ನೆರವಾಗುತ್ತಿರುವುದಾಗಿ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ, ಅಭಿಮಾನಿಗಳಿಗೂ ಪ್ರವಾಹ ಪೀಡಿತರಿಗೆ ನೆರವಾಗಲು ಕರೆ ನೀಡಿದ್ದಾರೆ.