Publish Date: Wed, 29 Jul 2020 (13:23 IST)
Updated Date: Wed, 29 Jul 2020 (13:24 IST)
ಮುಂಬೈ: ತನ್ನ ಜೀವನವನ್ನು ಬದಲಾಯಿಸಿದ್ದೇ ಪತ್ನಿ ಅನುಷ್ಕಾ ಶರ್ಮಾ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್ ಜತೆಗಿನ ಚಿಟ್ ಚ್ಯಾಟ್ ವೇಳೆ ಕೊಹ್ಲಿ ಪತ್ನಿಗೆ ಭರಪೂರ ಹೊಗಳಿಕೆ ನೀಡಿದ್ದಾರೆ. ನಾನು ಒಂದು ವೇಳೆ ಅನುಷ್ಕಾಳನ್ನು ಭೇಟಿಯಾಗದೇ ಹೋಗಿರುತ್ತಿದ್ದರೆ ಈವತ್ತು ನಾನು ಹೇಗಿದ್ದೇನೋ ಹಾಗಿರುತ್ತಿರಲಿಲ್ಲ. ನನ್ನನ್ನು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬದಲಾಯಿಸಿದ್ದೇ ಅನುಷ್ಕಾ ಎಂದು ಕೊಹ್ಲಿ ಹೊಗಳಿದ್ದಾರೆ.
‘ಒಬ್ಬ ವ್ಯಕ್ತಿಯಾಗಿ, ಆಟಗಾರನಾಗಿ ನನ್ನಲ್ಲಿ ಜವಾಬ್ಧಾರಿ ತುಂಬಿದ್ದೇ ಅನುಷ್ಕಾ. ಅವಳು ನನ್ನನ್ನು ಬೇರೆಯವರು ಮಾದರಿಯಾಗಿ ನೋಡುವಂತೆ ಬದಲಾಯಿಸಿದಳು’ ಎಂದು ಕೊಹ್ಲಿ ಹೇಳಿದ್ದಾರೆ.