Publish Date: Wed, 29 Jul 2020 (13:07 IST)
Updated Date: Wed, 29 Jul 2020 (13:09 IST)
ಮುಂಬೈ: ಟೀಂ ಇಂಡಿಯಾದ ಕ್ರಿಕೆಟ್ ದೊರೆಯೆನಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್ ತಮ್ಮ ನಿವೃತ್ತ ಜೀವನವನ್ನು ಅಪ್ಪಟ ಮಣ್ಣಿನ ಮಗನಂತೆ ಕಳೆಯುತ್ತಿದ್ದಾರೆ.
ತಮ್ಮ ಅಡುಗೆ ಮನೆಯ ತ್ಯಾಜ್ಯಗಳನ್ನು ಬಳಸಿಕೊಂಡು ಮನೆಯಲ್ಲೇ ತೋಟಗಾರಿಕೆ ಮಾಡುತ್ತಿದ್ದಾರೆ. ಟೇರೇಸ್ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಚಿನ್ ಅಡುಗೆ ಮನೆಯ ತ್ಯಾಜ್ಯಗಳನ್ನೇ ಗಿಡಗಳಿಗೆ ಗೊಬ್ಬರವಾಗಿ ಬಳಸುತ್ತಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮಾಹಿತ ಕೊಡುತ್ತಿರುವ ಸಚಿನ್ ಟೇರೇಸ್ ಕೃಷಿ ಮಾಡುವವರಿಗೆ ಸ್ಪೂರ್ತಿಯಾಗಿದ್ದಾರೆ.