Publish Date: Thu, 30 Jul 2020 (10:49 IST)
Updated Date: Thu, 30 Jul 2020 (10:51 IST)
ಮುಂಬೈ: ಐಪಿಎಲ್ 13 ನವಂಬರ್ 8 ಕ್ಕೆ ಮುಗಿಯುತ್ತದೆ ಎಂದುಕೊಂಡಿದ್ದವರಿಗೆ ಬಿಸಿಸಿಐ ಶಾಕ್ ಕೊಡಲು ಮುಂದಾಗಿದೆ. ಫೈನಲ್ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ಐಪಿಎಲ್ ಆಡಳಿತ ಮಂಡಳಿ ನಾಳೆ ನಡೆಯಲಿದ್ದು, ಅದಕ್ಕೂ ಮೊದಲು ಇಂತಹದ್ದೊಂದು ಸುದ್ದಿ ಕೇಳಿಬಂದಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಈ ತೀರ್ಮಾನವಾಗುವ ಸಾಧ್ಯತೆಯಿದೆ.
ಆರಂಭದ ದಿನಾಂಕದಲ್ಲಿ ಬದಲಾವಣೆ ಸಾಧ‍್ಯತೆಯಿಲ್ಲ. ಆದರೆ ಫೈನಲ್ ಪಂದ್ಯವನ್ನು 8 ರ ಬದಲಾಗಿ 10 ಕ್ಕೆ ಮುಂದೂಡುವ ಸಾಧ‍್ಯತೆ ಹೆಚ್ಚಿದೆ. ಇದಾದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಬೇಕಿದೆ. ಹೀಗಾಗಿ ಯುಎಇನಿಂದಲೇ ಆಟಗಾರರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲು ಫೈನಲ್ ಪಂದ್ಯವನ್ನು ಮುಂದೂಡಲು ಬಿಸಿಸಿಐ ಚಿಂತನೆ ನಡೆಸಿದೆ. ಭಾರತೀಯ ಆಟಗಾರರು ಮರಳಿ ಭಾರತಕ್ಕೆ ಬಂದರೆ ಮತ್ತೆ ಆಸ್ಟ್ರೇಲಿಯಾಕ್ಕೆ ಕಳುಹಿಸಲು ಕ್ವಾರಂಟೈನ್ ಅಡ್ಡಿಯಾಗುತ್ತದೆ. ಇದೇ ಕಾರಣಕ್ಕೆ ಈ ತೀರ್ಮಾನ ಎನ್ನಲಾಗಿದೆ.