ಕಾಮೆಂಟರಿ ಹೇಳಲು ಮತ್ತೆ ಅವಕಾಶ ಕೊಡಿ: ಬಿಸಿಸಿಐ ಮುಂದೆ ಬೇಡಿಕೊಂಡ ಸಂಜಯ್ ಮಂಜ್ರೇಕರ್

ಶುಕ್ರವಾರ, 31 ಜುಲೈ 2020 (13:37 IST)
ಮುಂಬೈ: ಕಾಮೆಂಟರಿ ಪ್ಯಾನೆಲ್ ನಿಂದ ಬಿಸಿಸಿಐ ಹೊರ ಹಾಕಿದ್ದ ಸಂಜಯ್ ಮಂಜ್ರೇಕರ್ ಈಗ ಮತ್ತೆ ಐಪಿಎಲ್ ನಲ್ಲಿ ಕಾಮೆಂಟರಿ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.


ಕಳೆದ ಬಾರಿ ಐಪಿಎಲ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಬಿಸಿಸಿಐ ಅವರನ್ನು ಕಾಮೆಂಟರಿ ಪ್ಯಾನೆಲ್ ನಿಂದ ಹೊರಹಾಕಿತ್ತು. ಇದೀಗ ಈ ಬಾರಿಯ ಐಪಿಎಲ್ ನಲ್ಲಿ ಕಾಮೆಂಟರಿ ಮಾಡುವುದಕ್ಕೆ ಅವಕಾಶ ಕೊಡಿ ಎಂದು ಮಂಜ್ರೇಕರ್ ಹೇಳಿದ್ದಾರೆ.

ಮತ್ತೊಮ್ಮೆ ಬಿಸಿಸಿಐ ನಿಯಮಗಳಿಗೆ ಧಕ್ಕೆ ತರುವ ರೀತಿಯಲ್ಲಿ ಕಾಮೆಂಟ್ ಮಾಡಲ್ಲ. ಮತ್ತೆ ನನ್ನನ್ನೂ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್ 13 ಗೆ ಕಡಿಮೆ ಸ್ಟಾಫ್, ಹೆಚ್ಚು ಆಟಗಾರರು: ಇದುವೇ ಬಿಸಿಸಿಐ ಪಾಲಿಸಿ